Select Your Language

Notifications

webdunia
webdunia
webdunia
webdunia

ದೊಡ್ಮನೆಯಲ್ಲಿ ಹೆಣ್ಣು ಮಕ್ಕಳನ್ನು ನಿಂದಿಸಿದ ಜಗದೀಶ್‌ಗೆ ಸಂಕಷ್ಟ

ದೊಡ್ಮನೆಯಲ್ಲಿ ಹೆಣ್ಣು ಮಕ್ಕಳನ್ನು ನಿಂದಿಸಿದ ಜಗದೀಶ್‌ಗೆ ಸಂಕಷ್ಟ

Sampriya

ಬೆಂಗಳೂರು , ಶುಕ್ರವಾರ, 25 ಅಕ್ಟೋಬರ್ 2024 (19:35 IST)
ಬೆಂಗಳೂರು: ಮಹಿಳೆಯ ಮೇಲೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿ ಬಿಗ್‌ಬಾಸ್ ಮನೆಯಿಂದ ಹೊರಬಂದಿರುವ ಲಾಯರ್ ಜಗದೀಶ್ ಅವರಿಗೆ ಕಿಡಿಗೇಡಿಗಳ ಕಾಟ ಹೆಚ್ಚಾಗಿದೆಯಂತೆ. ಈ ಹಿನ್ನೆಲೆ ಭದ್ರತೆ ನೀಡಿ ಎಂದು ಜಗದೀಶ್ ಅವರು ಠಾಣೆ ಮೆಟ್ಟಿಲೇರಿದ್ದಾರೆ.

ದೂರಿನಲ್ಲಿ ಅಪರಿಚಿತರು ಮನೆ ಬಳಿ ಬಂದು ಗಲಾಟೆ ಮಾಡ್ತಿದ್ದಾರೆ. ಅಹಿತಕರ ಘಟನೆ ನಡೆಯುವುದಕ್ಕೂ ಮುನ್ನ ಮುನ್ನೆಚ್ಚರಿಕೆ ವಹಿಸಬೇಕು ಅಂತ ಕಮಿಷನರ್‌ಗೆ ಮನವಿ ಮಾಡಿದ್ದಾರೆ.

ಇಂದು (ಅ.25) ಬೆಂಗಳೂರಿನ ಕಮಿಷನರ್ ಕಚೇರಿಗೆ ಭೇಟಿ ನೀಡಿದ ಜಗದೀಶ್ ಅವರು ನನಗೆ ಭದ್ರತೆ ನೀಡಿ ಎಂದು ಅಧಿಕಾರಿಗಳಿಗೆ ಮನವಿ ಪತ್ರ ನೀಡಿದ್ದಾರೆ.

ದೊಡ್ಮನೆಯಲ್ಲಿದ್ದಾಗ ಹೆಣ್ಣು ಮಕ್ಕಳಿಗೆ ಕೆಟ್ಟ ಪದಗಳಲ್ಲಿ ನಿಂದಿಸಿ, ದೊಡ್ಡ ಜಗಳಕ್ಕೆ ಕಾರಣವಾಗಿತ್ತು.  ಬಿಗ್ ಬಾಸ್ ಮನೆಯಲ್ಲಿ ಹೆಣ್ಣಿನ ನಿಂದನೆಯನ್ನು ಸಹಿಸಲು ಆಗಲ್ಲ ಎಂದು ಜಗದೀಶ್ ಅವರನ್ನು ಮನೆಯಿಂದ ಹೊರಕಳಿಸಿದ್ರು. ಇದೀಗ  ಮನೆ ಮುಂದೆ ಜನರು ಬಂದು ಗಲಾಟೆ ಮಾಡ್ತಿದ್ದಾರೆ, ನನಗೆ ಭದ್ರತೆ ಬೇಕು ಎಂದು ಜಗದೀಶ್ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೈದಾರಾಬಾದ್‌ನ ಥಿಯೇಟರ್‌ನಲ್ಲಿ ಕನ್ನಡ ನಟನಿಗೆ ಕಪಾಳಮೋಕ್ಷ, ಕಾರಣ ಹೀಗಿದೆ