ಚೆನ್ನೈ: ದಳಪತಿ ವಿಜಯ್ ಮತ್ತು ತ್ರಿಶಾ ಜೊತೆಯಾಗಿ ಪ್ರೈವೇಟ್ ಜೆಟ್ ನಲ್ಲಿ ಹೋಗುವ ಫೋಟೋಗಳು ವೈರಲ್ ಆಗುತ್ತಿದ್ದಂತೇ ನೆಟ್ಟಿಗರು ವಿಜಯ್ ಪತ್ನಿ ಸಂಗೀತಾಗೆ ನ್ಯಾಯ ಕೊಡಿ ಎಂದು ಸೋಷಿಯಲ್ ಮೀಡಿಯಾದಲ್ಲಿಅಭಿಯಾನವನ್ನೇ ಶುರು ಮಾಡಿದ್ದಾರೆ.
ಇತ್ತೀಚೆಗೆ ದಳಪತಿ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಯಿದೆ. ಇದಕ್ಕೆ ಪುಷ್ಠಿ ನೀಡುವಂತೆ ದಳಪತಿ ವಿಜಯ್, ನಟಿ ತ್ರಿಶಾಗೆ ಹತ್ತಿರವಾಗುತ್ತಿದ್ದಾರೆ ಎಂಬ ರೂಮರ್ ಗಳೂ ಇವೆ. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ.
ಅದಕ್ಕೆ ತಕ್ಕಂತೆ ವಿದೇಶದಲ್ಲಿ ಈ ಹಿಂದೆ ಒಟ್ಟಿಗೇ ಶಾಪಿಂಗ್ ಮಾಡುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಇನ್ನು, ವಿಜಯ್ ಪತ್ನಿ ಜೊತೆ ಇತ್ತೀಚಿಗಿನ ದಿನಗಳಲ್ಲಿ ಎಲ್ಲೂ ಕಾಣಿಸಿಕೊಳ್ಳದೇ ಇರುವುದೂ ಈ ಅನುಮಾನವನ್ನು ಹೆಚ್ಚಿಸಿದೆ. ಈ ನಡುವೆ ವಿಜಯ್ ಮತ್ತು ತ್ರಿಶಾ ಗೋವಾದಲ್ಲಿ ನಟಿ ಕೀರ್ತಿ ಸುರೇಶ್ ಮದುವೆ ಒಟ್ಟಿಗೇ ಪ್ರೈವೇಟ್ ಜೆಟ್ ನಲ್ಲಿ ಪ್ರಯಾಣಿಸಿದ್ದಾರೆ ಎಂಬ ಸುದ್ದಿಗಳಿವೆ. ಇದಕ್ಕೆ ತಕ್ಕಂತೆ ವಿಜಯ್ ಮತ್ತು ತ್ರಿಶಾ ಜೊತೆಗೇ ಹೋಗುವ ಫೋಟೋಗಳು ವೈರಲ್ ಆಗಿದ್ದವು.
ಈ ಫೋಟೋಗಳು ವೈರಲ್ ಆಗುತ್ತಿದ್ದಂತೇ ಕೆಲವು ಅಭಿಮಾನಿಗಳು ಜಸ್ಟಿಸ್ ಫಾರ್ ಸಂಗೀತಾ ಎಂದು ಅಭಿಯಾನವನ್ನೇ ಶುರು ಮಾಡಿದ್ದಾರೆ. ಪತ್ನಿ ಇರುವಾಗ ವಿಜಯ್ ಈ ರೀತಿ ಮತ್ತೊಬ್ಬ ನಟಿಯ ಸಹಸವಾಸ ಮಾಡುವುದು ಸರಿಯಲ್ಲ ಎಂದು ಕೆಲವರು ಆಕ್ಷೇಪಿಸಿದ್ದಾರೆ. ಇಬ್ಬರೂ ನಿಜವಾಗಿಯೂ ಡೇಟ್ ಮಾಡುತ್ತಿದ್ದಾರೆಯೇ ಅಥವಾ ಕೇವಲ ಸ್ನೇಹಿತರೇ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಅಭಿಮಾನಿಗಳು ಮಾತ್ರ ಈ ಕಾರಣಕ್ಕೆ ವಿಜಯ್ ಮೇಲೆ ಮುನಿಸಿಕೊಂಡಿದ್ದಾರೆ.