ದರ್ಶನ್ ಯಾವ ‘ಎಂಎಲ್ ಎ’ ಗೆ ಸಫೋರ್ಟ್ ಮಾಡುತ್ತಿದ್ದಾರೆ ಗೊತ್ತಾ….?

Webdunia
ಮಂಗಳವಾರ, 1 ಮೇ 2018 (13:45 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್  ಚಿತ್ರರಂಗಕ್ಕೆ ಬರುವ ಹೊಸಬರನ್ನು ಬೆಳೆಸುತ್ತಾ ಬರುತ್ತಿರುವ ಒಂದೊಳ್ಳೆ ನಟ. ದರ್ಶನ್ ಈಗ 'ಎಂಎಲ್ಎ' ಗೆ ಬೆಂಬಲಕ್ಕೆ ನೀಡುತ್ತಿದ್ದಾರೆ. ಇದೇನು ದರ್ಶನ್ ಯಾವ ಎಂಎಲ್ ಎಗೆ ಬೆಂಬಲ ನೀಡುತ್ತಿದ್ದಾರೆ ಎಂದು ಯೋಚಿಸುತ್ತಿದ್ದೀರಾ….? ದರ್ಶನ್ ಸಪೋರ್ಟ್ ನೀಡುತ್ತಿರುವುದು ಎಂಎಲ್ ಎ ಸಿನಿಮಾಕ್ಕೆ.



ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ಅಭಿನಯದ 'ಎಂಎಲ್ಎ' ಚಿತ್ರಕ್ಕೆ ನಟ ದರ್ಶನ್ ಸಾಥ್ ನೀಡಲು ಮುಂದಾಗಿದ್ದಾರೆ. ಇಂದು (ಮೇ.1) ನಡೆಯುವ 'ಎಂಎಲ್ಎ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ದರ್ಶನ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.


ಇನ್ನು ದರ್ಶನ್ ಕುರಿತು ಪ್ರಥಮ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು ಹೀಗೆ, ‘ನಿಜಕ್ಕೂ ದರ್ಶನ್ ಸರ್ ಈ ಕಾರಣಕ್ಕೇ ಗ್ರೇಟ್. ಅವತ್ತು ಮೈಸೂರಲ್ಲಿ ಯಜಮಾನ ಸಿನಿಮಾ ಶೂಟಿಂಗ್ ನಡೆಯಬೇಕಾದರೆ ಕಾಲ್ ಮಾಡಿ ಹೋಗಿದ್ದೆ. ಕಂಡೊಡನೆ ಬಹಳ ಪ್ರೀತಿಯಿಂದ ಮಾತಾಡಿದ್ರು. ಆಡಿಯೋ ರಿಲೀಸ್ ಗೆ ಆಹ್ವಾನ ಮಾಡಿದೆ. ಖಂಡಿತಾ ಬರ್ತೀನಮ್ಮ’ ಅಂದರು. ವಾರಕ್ಕೊಂದು ಫೋನ್ ನಂಬರ್ ಬದಲಿಸೋ ದರ್ಶನ್ ಸರ್ ಯಾವತ್ತೂ ಕೊಟ್ಟ ಮಾತು ಬದಲಿಸಿಲ್ಲ. ಇದಕ್ಕೆ ಈ ಮನುಷ್ಯನ್ನ ಕಂಡರೆ ಜನ ಪ್ರೀತಿಯಿಂದ ಹಿಂದೆ ಬೀಳೋದು. ಅಂದಹಾಗೆ ನನ್ನ M.L.A ಸಿನಿಮಾ ಆಡಿಯೋ ಬಿಡುಗಡೆಗೆ ದರ್ಶನ್ ಸರ್ ನ ಕರೆಸಲು ನೆರವಾದ ಎಲ್ಲರಿಗೂ ಚಿರಋಣಿ’ ಎಂದಿದ್ದಾರೆ ಪ್ರಥಮ್.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಆರ್‌ಸಿಬಿ ಆಟಗಾರ ದೇವದತ್‌ ಪಡಿಕ್ಕಲ್ ಜತೆ ನಟಿ ಶೆಹನಾಜ್ ಗಿಲ್ ಡೇಟಿಂಗ್

ಅಯೋಧ್ಯೆಯಲ್ಲಿ ₹3.31ಕೋಟಿಯ ಭೂಮಿ ಖರೀದಿಸಿದ ನಟ ರಣಬೀರ್ ಕಪೂರ್

ರಜನಿಕಾಂತ್‌ ಅಭಿನಯದ ಜೈಲರ್ 2 ಸೆಟ್‌ನಲ್ಲಿ ದುರ್ಘಟನೆ: ವಿದ್ಯುತ್ ಶಾಕ್‌ ತಗಲಿ ತಂತ್ರಜ್ಞ ಸಾವು

ಇದೇನಾಗಿ ಹೋಯ್ತು.. ಸುಪ್ರೀಂಕೋರ್ಟ್ ತೀರ್ಪಿನಿಂದ ನಟ ದರ್ಶನ್ ಗೆ ಸಂಕಷ್ಟ

ಹಿಟ್ಲರ್ ಸೀರಿಯಲ್‌ನಲ್ಲಿ ದಿಲೀಪ್ ರಾಜ್‌ಗೆ ನಾಯಕಿಯಾಗಿದ್ದ ಮಲೈಕಾ ಭಾವುಕಾ ಪೋಸ್ಟ್‌

ಮುಂದಿನ ಸುದ್ದಿ
Show comments