ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇಂದು ಮಹತ್ವದ ದಿನ. ಯಾಕೆಂದರೆ ಇಂದು ಬಹುನಿರೀಕ್ಷಿತ ಮೂರು ಸಿನಿಮಾಗಳ ಬಗ್ಗೆ ಅಪ್ ಡೇಟ್ ಸಿಗಲಿದೆ.
ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ ಆರ್. ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಸಿನಿಮಾದ ರಿಲೀಸ್ ಡೇಟ್ ಇಂದು ಘೋಷಣೆಯಾಗಲಿದೆ.
ಧ್ರುವ ಸರ್ಜಾ ನಾಯಕರಾಗಿರುವ ಮಾರ್ಟಿನ್ ಟೀಸರ್ ಅಪ್ ಡೇಟ್ ಇಂದು ಸಿಗಲಿದೆ. ಅಲ್ಲದೆ ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಅಪ್ ಡೇಟ್ ಇಂದು ಹೊರಬೀಳುವ ನಿರೀಕ್ಷೆಯಿದೆ.