Select Your Language

Notifications

webdunia
webdunia
webdunia
Sunday, 6 April 2025
webdunia

ನಟಿ ಪ್ರೇಮಾ ಎರಡನೇ ಮದುವೆಗೆ ತಯಾರಿ?

ಪ್ರೇಮಾ
ಬೆಂಗಳೂರು , ಶುಕ್ರವಾರ, 20 ಜನವರಿ 2023 (09:19 IST)
Photo Courtesy: Twitter
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ನಂ.1 ನಾಯಕಿಯಾಗಿ ಮಿಂಚಿದ್ದ ನಟಿ ಪ್ರೇಮಾ ಈಗ ಎರಡನೇ ಮದುವೆಗೆ ಸಿದ್ಧತೆ ನಡೆಸಿದ್ದಾರಾ? ಇಂತಹದ್ದೊಂದು ಅನುಮಾನ ಮೂಡಿದೆ.

ಪ್ರೇಮಾ ನಿನ್ನೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳಿದ್ದಾಗ ಕಾಪು ಕೊರಗಜ್ಜ ಸನ್ನಿಧಿಗೆ ಭೇಟಿ ನೀಡಿದ್ದರು. ಈ ವೇಳೆ ಅರ್ಚಕರ ಬಳಿ ತಮ್ಮ ಪ್ರಾರ್ಥನೆ ಏನೆಂದು ಹೇಳಿದ್ದಾರೆ.

ಈ ವೇಳೆ ಕೊರಗಜ್ಜನ ಬಳಿ ಕಂಕಣ ಭಾಗ್ಯಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಈಗಾಗಲೇ ನೋಡಿರುವ ವರನ ಜೊತೆ ಮದುವೆ ಮಾಡಿಸುವಂತೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಹೀಗಾಗಿ ಪ್ರೇಮಾ ಎರಡನೇ ಮದುವೆಗೆ ಸಿದ್ಧರಾಗಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಈಗಾಗಲೇ ತಿಳಿದಿರುವಂತೆ ಪ್ರೇಮಾ ಜೀವನ್ ಅಪ್ಪಚ್ಚು ಎಂಬವರ ಜೊತೆ ಮದುವೆಯಾಗಿ 2016 ರಲ್ಲಿ ವಿಚ್ಛೇದನ ಪಡೆದಿದ್ದರು. ಅವರಿಗೆ ಮಕ್ಕಳಿಲ್ಲ. ಈಗ ಎರಡನೇ ಮದುವೆಗೆ ಸಿದ್ಧರಾಗಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಂದೆ-ತಾಯಿ ಸಮಾಧಿ ಬಳಿ ಬರ್ತ್ ಡೇ ಆಚರಿಸಿದ ದುನಿಯಾ ವಿಜಯ್