Publish Date: Fri, 05 May 2023 (20:50 IST)
Updated Date: Fri, 05 May 2023 (19:04 IST)
ನಟ ಕಿಚ್ಚ ಸುದೀಪ್ ಖಾಸಗಿ ವಿಡಿಯೋ ಬಿಡುಗಡೆ ಮಾಡಿದ ಪ್ರಕರಣದಲ್ಲಿ ಕೊನೆಗೂ ಸಿಸಿಬಿ ಪೊಲೀಸ್ರು. ಸುದೀಪ್ ಚಾರಿಟೇಬಲ್ ಟ್ರಸ್ಟ್ ರುವಾರಿಯಾಗಿದ್ದ ರಮೇಶ್ ಕಿಟ್ಟಿ ಸುದೀಪ್ ಆಪ್ತನಾಗಿದ್ದ. ಈ ಹಿಂದೆ ದರ್ಶನ ಸಿನಿಮಾ ಸೇರಿ ಕೆಲ ಸಿನಿಮಾಗಳನ್ನ ರಮೇಶ್ ಕಿಟ್ಟಿ ಡೈರೆಕ್ಟ್ ಮಾಡಿದ್ದ. ಸುದೀಪ್ ಮತ್ತು ರಮೇಶ್ ನಡುವೆ ಚಾರಿಟಿ ಹಣದ ವಿಚಾರವಾಗಿ ವೈ ಮನಸ್ಸು ಉಂಟಾಗಿತ್ತು. ಚಾರಿಟಿಯಲ್ಲಿ ಸುದೀಪ್ ಮೇಲೆ ನಂಬಿಕೆ ಇಟ್ಟು ಎರಡು ಕೋಟಿ ಹಣ ಇನ್ವೆಸ್ಟ್ ಮಾಡಿದ್ದೆ. ಆದ್ರೆ ಸುದೀಪ್ ಹಣ ಕೊಡದೆ ಮೋಸ ಮಾಡಿದ್ರು ಈ ಕೋಪಕ್ಕೆ ಈ ರೀತಿಯ ಬೆದರಿಕೆ ಪತ್ರ ಬರೆದಿರೋದಾಗಿ ರಮೇಶ್ ಪೊಲೀಸ್ರ ಮುಂದೆ ಬಾಯಿ ಬಿಟ್ಟಿದ್ದಾನೆ.ಆದ್ರೆ ರಮೇಶ್ ಹಿಂದೆ ಇನ್ನೂ ಕೆಲ ವ್ಯಕ್ತಿಗಳಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ .