ಬೆಂಗಳೂರು: ವೀಕೆಂಡ್ ಹೇಗೆ ಕಳೆಯೋದು ಎಂದು ಈ ವಾರ ತಲೆಕೆಡಿಸಿಕೊಳ್ಳಲೇಬೇಕಾಗಿಲ್ಲ. ಯಾಕೆಂದರೆ ಈ ವಾರಂತ್ಯ ಪೂರ್ತಿ ನಿಮ್ಮನ್ನು ಮನರಂಜಿಸಲು ಎಲ್ಲಾ ಚಾನೆಲ್ ಗಳು ಸ್ಪರ್ಧೆಗೆ ಬಿದ್ದಿವೆ.
ಇಂದು ಕ್ರಿಕೆಟ್ ಪ್ರಿಯರಿಗೆ ಭಾರತ-ಅಫ್ಘಾನಿಸ್ತಾನ ನಡುವಿನ ಪಂದ್ಯ ವೀಕ್ಷಿಸಲು ಸ್ಟಾರ್ ಸ್ಪೋರ್ಟ್ಸ್ ಸಿದ್ದವಾಗಿದೆ. ಅತ್ತ ಕನ್ನಡ ಚಾನೆಲ್ ಗಳಲ್ಲಿ ಈ ವಾರ ಹಬ್ಬವೋ ಹಬ್ಬ.
ಇಂದಿನಿಂದ ಕಲರ್ಸ್ ಕನ್ನಡದಲ್ಲಿ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಆರಂಭವಾಗಲಿದ್ದು, ಪುನೀತ್ ರಾಜ್ ಕುಮಾರ್ ನಡೆಸಿಕೊಡುವ ಕಾರ್ಯಕ್ರಮ ನೋಡಲು ಅಭಿಮಾನಿಗಳಲ್ಲಿ ಉತ್ಸಾಹ ತುಂಬಿದೆ. ಜೀ ವಾಹಿನಿಯಲ್ಲಿ ಇಂದು ಮತ್ತು ನಾಳೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹಾಸ್ಯ ನಟರಾದ ಚಿಕ್ಕಣ್ಣ ಮತ್ತು ಬಿರಾದರ್ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಅದಲ್ಲದೆ, ಭಾನುವಾರ ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಸಿನಿಮಾ ಪ್ರಸಾರವಾಗುತ್ತಿದೆ. ಹೀಗಾಗಿ ಈ ವಾರಂತ್ಯದ ನಿಮ್ಮ ಖುಷಿ ಅನುಭವಿಸಲು ಅಡ್ಡಿಯಿಲ್ಲ.