Select Your Language

Notifications

webdunia
webdunia
webdunia
webdunia

ರೀಲ್ ಲೈಫ್ ನಲ್ಲೂ ಜೋಡಿಯಾಗಿ ನಟಿಸಲಿದೆ ಈ ರಿಯಲ್ ಲೈಫ್ ಜೋಡಿ!

ರೀಲ್ ಲೈಫ್ ನಲ್ಲೂ ಜೋಡಿಯಾಗಿ ನಟಿಸಲಿದೆ ಈ ರಿಯಲ್ ಲೈಫ್ ಜೋಡಿ!
ಬೆಂಗಳೂರು , ಶನಿವಾರ, 7 ಏಪ್ರಿಲ್ 2018 (10:08 IST)
ಬೆಂಗಳೂರು : ಕಿಚ್ಚ ಸುದೀಪ್ ಅವರು ಚಿತ್ರಕಥೆ ರಚಿಸಿ ನಟಿಸುತ್ತಿರುವ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಆದರೆ ಇದೀಗ ಅಂಬರೀಶ್ ಅವರಿಗೆ ಜೋಡಿಯಾಗಿ ಯಾರು ನಟಿಸುತ್ತಾರೆ ಎಂಬ ಗೊಂದಲ ಹಲವರಲ್ಲಿದೆ.


ಮೊದಲು ಅಂಬರೀಶ್ ಅವರಿಗೆ ಜೋಡಿಯಾಗಿ ಸುಹಾಸಿನಿ ಅವರು ನಟಿಸುತ್ತಾರೆ ಎಂಬ ಸುದ್ದಿ ಕೇಳಿಬಂದಿತ್ತು. ಆದರೆ, ಅವರು ಡೇಟ್ಸ್ ಸಮಸ್ಯೆಯಿಂದಾಗಿ ಹಿಂದೇಟು ಹಾಕಿದ್ದಾರೆ. ನಂತರ ನಟಿ ಖುಷ್ಬು ಹಾಗೂ ರಮ್ಯಾ ಕೃಷ್ಣ ಅವರ ಜೊತೆಗೆ ಚಿತ್ರತಂಡ ಮಾತುಕತೆ ನಡೆಸಿತ್ತು. ಆದರೆ ಅವರಿಬ್ಬರು ಕೂಡ ಬ್ಯೂಸಿ ಇರುವುದರಿಂದ ಚಿತ್ರತಂಡ ಅವರನ್ನು ಕೈಬಿಟ್ಟಿದೆ. ಆದರೆ ಇದೀಗ ಮೂಲಗಳ ಪ್ರಕಾರ ಅಂಬರೀಶ್ ಅವರ ಧರ್ಮಪತ್ನಿ ಸುಮಲತಾ ಅವರನ್ನು ಕರೆತರುವ ಯೋಚನೆ ಚಿತ್ರತಂಡ ಮಾಡಿರುವುದಾಗಿ ತಿಳಿದುಬಂದಿದೆ.


ಗುರುದತ್ ಗಾಣಿಗ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಅಂಬರೀಶ್, ಸುದೀಪ್, ಶ್ರುತಿ ಹರಿಹರನ್ ಮುಂತಾದವರು ನಟಿಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ದೀಪಿಕಾ ಪಡುಕೋಣೆ ಯಾವಾಗ ಮದುವೆಯಾಗುತ್ತಾರಂತೆ ಗೊತ್ತಾ..?