ಇದು, ಇದು actually ಚೆನ್ನಾಗಿರೋದು, ಕಿಚ್ಚ ಬಿಚ್ಚಿಟ್ಟ ಅಸಲಿಗೆ ಪ್ರೇಕ್ಷಕರೂ ಫುಲ್ ಖುಷ್‌

Sampriya
ಶನಿವಾರ, 8 ನವೆಂಬರ್ 2025 (18:51 IST)
Photo Credit X
ಬೆಂಗಳೂರು: ಚಪ್ಪಲಿ ತೋರಿಸಿ ಕಲಾವಿದರಿಗೆ ಅವಮಾನ ಮಾಡಿದ್ದಾಳೆ ಎಂದು ರಕ್ಷಿತಾ ಶೆಟ್ಟಿ ವಿರುದ್ಧ ಮತ್ತೇ ಆರೋಪ ಮಾಡಿದ ಅಶ್ವಿನಿ ಗೌಡಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. 

ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋ ದಿನಕ್ಕೊಂದು ವಿಚಾರವಾಗಿ ಸುದ್ದಿಯಾಗುತ್ತಿದೆ. ರಕ್ಷಿತಾ ಶೆಟ್ಟಿ ವಿರುದ್ಧ ಆರಂಭದಿಂದಲೂ ಅಶ್ವಿನಿ ಗೌಡ ಅಸಮಾಧಾನ ಹೊರಹಾಕುತ್ತಲೇ ಇದ್ರು. ಕಳೆದ ವಾರ ರಕ್ಷಿತಾ ಕಲಾವಿದರಿಗೆ ಚಪ್ಪಲಿ ತೋರಿಸಿ ಅವಮಾನ ಮಾಡಿದ್ರೂ ಎಂದು ಈ ವಾರವೂ ಕಿಚ್ಚನ ಮುಂದೆ ಹೇಳಿಕೊಂಡಿದ್ದಾರೆ. 

ಇದಕ್ಕೆ ಸುದೀಪ್ ಅಂದಿನ ವಿಡಿಯೋವನ್ನು ತೋರಿಸಿ ಅಶ್ವಿನಿಗೆ ಘಟನೆ ಬಗ್ಗೆ ವಿವರಿಸಿದ್ದಾರೆ. 

ಅದು ಬಿಗ್​​ಬಾಸ್ ಮನೆಯಲ್ಲಿ ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲಿಯೂ ವ್ಯಾಪಕ ಚರ್ಚೆಯಾಗಿತ್ತು. ಇದೀಗ ಸುದೀಪ್, ಶನಿವಾರದ ಪಂಚಾಯ್ತಿಯಲ್ಲಿ ಸತ್ಯ ಏನೆಂಬುದನ್ನು ಬಿಡಿಸಿ ಜನರ ಮುಂದೆ ಇರಿಸಿದ್ದಾರೆ.


ಕಳೆದ ವಾರ ರಕ್ಷಿತಾ ಶೆಟ್ಟಿ ಮತ್ತು ಅಶ್ವಿನಿ ಗೌಡ ನಡುವೆ ನಡೆದ ವಾಗ್ವಾದದಲ್ಲಿ, ರಕ್ಷಿತಾ ನಾಟಕ ಆಡಬೇಡಿ ಎನ್ನುತ ಕಲಾವಿದರಿಗೆ ಚಪ್ಪಲಿ ತೋರಿಸಿ ಅವಮಾನ ಮಾಡಿದ್ದಾಳೆ ಎಂದು ಅಶ್ವಿನಿ ಗೌಡ ಆರೋಪಿಸಿದ್ದರು.

ಈ ಗಂಭೀರ ಆರೋಪಕ್ಕೆ ದೃಶ್ಯದ ಮೂಲಕ ಇಂದಿನ ಪಂಚಾಯಿತಿಯಲ್ಲಿ ಪ್ರತಿಕ್ರಿಯಿಸಿರುವ ಸುದೀಪ್​, ಇಲ್ಲಿ ಯಾರದ್ದು ತಪ್ಪು ಎಂಬುದನ್ನು ಸ್ಪಷ್ಟವಾಗಿ ಎತ್ತಿಹಿಡಿಯುವ ಪ್ರಯತ್ನಕ್ಕೆ ಮುಂದಾಗಿರುವುದು ಸದ್ಯ ವೀಕ್ಷಕರ ಮೆಚ್ಚುಗೆಗೆ ಕಾರಣವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈ ನಾಳೆ ತೆರೆಗೆ, ಮಾವನ ಸಿನಿಮಾಗೆ ಶುಭ ಹಾರೈಸಿದ ಕೆಎಲ್ ರಾಹುಲ್

ಈ ರೀತಿ ನಡೆದುಕೊಳ್ಳುವುದಕ್ಕೆ ನಾಚಿಕೆಯಾಗುವುದಿಲ್ವ: ಪಾಪರಾಜಿಗಳ ಮೇಲೆ ಸನ್ನಿ ಡಿಯೋಲ್ ಗರಂ

ಲೇಡಿ ಸೂಪರ್ ಸ್ಟಾರ್‌ ನಯನಾತಾರ ದಂಪತಿಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ ಸೇವೆ

ಎಲ್ಲರೆದುರೇ ರಶ್ಮಿಕಾ ಮಂದಣ್ಣಗೆ ಮುತ್ತಿಕ್ಕಿದ ವಿಜಯ್ ದೇವರಕೊಂಡ video

ಆಸ್ಪತ್ರೆಯಿಂದ ಹೊರಬರುತ್ತಿದ್ದ ಹಾಗೇ ಯೋಗ ಬೆಸ್ಟ್ ಎಂದ ನಟ ಗೋವಿಂದ

ಮುಂದಿನ ಸುದ್ದಿ
Show comments