Publish Date: Thu, 26 Oct 2023 (10:38 IST)
Updated Date: Thu, 26 Oct 2023 (10:41 IST)
ಬೆಂಗಳೂರು: ಹುಲಿ ಉಗುರಿನ ಲಾಕೆಟ್ ಹೊಂದಿದ ದೂರಿನ ಮೇಲೆ ನಟ ದರ್ಶನ್ ಮನೆಗೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅವರಿಗೆ ಸಿಕ್ಕಿದ್ದೇನು?
ದರ್ಶನ್ ಕತ್ತಿನಲ್ಲಿದ್ದ ಹುಲಿ ಉಗುರಿನ ಲಾಕೆಟ್ ಹೊಂದಿರುವ ಸರ ಗಮನಿಸಿ ಅವರ ಮೇಲೆ ದೂರು ನೀಡಲಾಗಿತ್ತು. ಆ ಬಗ್ಗೆ ಅವರ ನಿವಾಸಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದರು.
ಪರಿಶೀಲನೆ ವೇಳೆ 8 ಹುಲಿ ಉಗುರಿನ ಲಾಕೆಟ್ ಪತ್ತೆಯಾಗಿರುವುದು ತಿಳಿದುಬಂದಿದೆ. ಆದರೆ ಇದೆಲ್ಲಾ ನಕಲಿ ಎನ್ನಲಾಗಿದೆ. ಹಾಗಿದ್ದರೂ ಅವರ ಬಳಿಯಿರುವ ಎಲ್ಲಾ ಪೆಂಡೆಂಟ್ ಗಳನ್ನು ಅಧಿಕಾರಿಗಳಿಗೆ ಒಪ್ಪಿಸಿದ್ದು, ಪರೀಕ್ಷೆಯ ನಂತರ ಇದು ಅಸಲಿಯೋ, ನಕಲಿಯೋ ಎಂದು ಖಚಿತವಾಗಲಿದೆ.