Webdunia - Bharat's app for daily news and videos

Install App

ಇದೇ ನನ್ನ ಕೊನೆ ಸಿನಿಮಾ, ವೇದಿಕೆಯಲ್ಲಿ ಕಣ್ಣೀರು ಹಾಕಿದ ರಾಧಿಕಾ ಕುಮಾರಸ್ವಾಮಿ

Sampriya
ಭಾನುವಾರ, 22 ಸೆಪ್ಟಂಬರ್ 2024 (12:25 IST)
Photo Courtesy X
ಅಕ್ಟೋಬರ್ 3ರಂದು ರಾಧಿಕಾ ಕುಮಾರಸ್ವಾಮಿ ನಟನೆಯ ಭೈರಾದೇವಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಮೂಲಕ  ಕನ್ನಡದ ಸ್ವೀಟಿ ರಾಧಿಕಾ ಮತ್ತೇ ಕಮ್‌ ಬ್ಯಾಕ್‌ ಮಾಡುತ್ತಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅಘೋರಿ ಲುಕ್‌ನಲ್ಲಿ ಹೊಸ ಅವತಾರ ತಾಳಿದ್ದಾರೆ.

ಕೊರೊನಾ ಬರುವ ಮುಂಚೆನೆ ಶುರುವಾಗಿದ್ದ ಈ ಸಿನಿಮಾ ಇದೀಗ ಹೊಸ ಭರವಸೆಯನ್ನು ಮೂಡಿಸುತ್ತಿದೆ. ನಿನ್ನೆ ನಡೆದ ಸಿನಿಮಾ ಟ್ರೇಲರ್ ಲಾಂಚ್ ವೇಳೆ ರಾಧಿಕಾ ಕುಮಾರಸ್ವಾಮಿ ತಮ್ಮ ಸಿನಿ ಜರ್ನಿ ನೆನೆದು ಭಾವುಕರಾಗಿದ್ದಾರೆ.

ಈ ಸಿನಿಮಾ ಸಕ್ಸಸ್ ಆದರೆ ಮತ್ತೇ ಸಿನಿಮಾದಲ್ಲಿ ಅಭಿನಯ ಮಾಡ್ತೀನಿ, ಇಲ್ಲದಿದ್ರೆ ಇದೇ ನನ್ನ ಕೊನೆ ಸಿನಿಮಾ ಅಂತಾ ಅಂದು ಡೈರೆಕ್ಟರ್ ಜತೆ ಹೇಳಿದ್ದೆ. ಅದೇ ಮಾತನ್ನು ಇಂದು ಹೇಳ್ತಾ ಇದ್ದೀನಿ. ಈ ಸಿನಿಮಾದಲ್ಲಿ  ನನ್ನ ಅಭಿನಯವನ್ನು ಮೆಚ್ಚಿ, ಯಶಸ್ಸು ನೀಡಿದರೆ ಮಾತ್ರ ನಾನು ಮುಂದೆ ಬಣ್ಣ ಹಚ್ಚುತ್ತೀನಿ, ಇಲ್ಲದಿದ್ರೆ ಇದೇ ನನ್ನ ಕೊನೆ ಸಿನಿಮಾ ಆಗಿರುತ್ತದೆ ಎಂದು ಕಣ್ಣೀರು ಹಾಕಿದರು.

ನನಗೆ ಸಿನಿಮಾ ಮೇಲೆ ತುಂಬಾನೇ ನಂಬಿಕೆಯಿದೆ. ಎಲ್ಲರೂ ಕುಟುಂಬ ಸಮೇತ ಬಂದು ಸಿನಿಮಾ ನೋಡುವಂತಹ ಸಿನಿಮಾ ಎಂದರು. ಈ ಸಿನಿಮಾವನ್ನು ಶ್ರೀಜೈ ಅವರು ನಿರ್ದೇಶನ ಮಾಡಿದ್ದು, ಶಮಿಕಾ ಎಂಟರ್‌ಪ್ರೈಸಸ್ ಅಡಿಯಲ್ಲಿ ಚಿತ್ರ ಮೂಡಿಬಂದಿದೆ.

ಅಘೋರಿಯಾಗಿ ರಾಧಿಕಾ-ರವಿಶಂಕರ್, ಪೊಲೀಸ್ ಅಧಿಕಾರಿಯಾಗಿ ರಮೇಶ್ ಅರವಿಂದ್, ಅನುಪ್ರಭಾಕರ್ ಸೇರಿದಂತೆ ದೊಡ್ಡ ತಾರಾಬಳಗವನ್ನು ಹೊಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಒಂದು ಮಾತು ಎಲ್ಲವನ್ನೂ ನಿಭಾಯಿಸಬಹುದಿತ್ತು: ನಟಿ ರಮ್ಯಾ

ತುಳು ಸಿನಿಮಾಗೆ ಎಂಟ್ರಿ ಕೊಟ್ಟ ಬ್ಯಾಂಗಲ್ ಬಂಗಾರಿ ಖ್ಯಾತಿಯ ಆಂಟೋನಿ, ರೂಪೇಶ್ ಶೆಟ್ಟಿ ಸಿನಿಮಾಗೆ ಗಾಯನ

ಡಿ ಫ್ಯಾನ್ಸ್ ಅಶ್ಲೀಲ ಮೆಸೇಜ್‌: ಅಭಿಮಾನಿಗಳ ವಿರುದ್ಧ ಪೊಲೀಸ್ ಕಮಿಷನರ್‌ಗೆ ನಟಿ ರಮ್ಯಾ ದೂರು

₹72 ಕೋಟಿ ಆಸ್ತಿಯನ್ನು ಸಂಜಯ್‌ ದತ್‌ಗೆ ಬಿಟ್ಟು ಹೋದ ಮಹಿಳಾ ಅಭಿಮಾನಿ, ನಟ ಅದನ್ನೇನು ಮಾಡಿದ್ರೂ ಗೊತ್ತಾ

ಡಿ ಫ್ಯಾನ್ಸ್‌ನಿಂದ ಅಶ್ಲೀಲ ಕಾಮೆಂಟ್ಸ್‌: ರಮ್ಯಾ ದೂರು ಕೊಟ್ಟರೆ ಕಾನೂನು ಕ್ರಮ ಎಂದ ಪರಮೇಶ್ವರ್‌

ಮುಂದಿನ ಸುದ್ದಿ
Show comments