Select Your Language

Notifications

webdunia
webdunia
webdunia
webdunia

ನನ್ನ ಮಗಳು ಟೆನಿಸ್ ಪ್ಲೇಯರ್ ಆಗಬೇಕೆಂದು ಅವಳ ಅಪ್ಪನ ಆಸೆ: ರಾಧಿಕಾ ಕುಮಾರಸ್ವಾಮಿ

Radhika Kumaraswamy

Krishnaveni K

ಬೆಂಗಳೂರು , ಶುಕ್ರವಾರ, 6 ಸೆಪ್ಟಂಬರ್ 2024 (10:05 IST)
Photo Credit: Facebook
ಬೆಂಗಳೂರು: ನಟಿ ರಾಧಿಕಾ ಕುಮಾರಸ್ವಾಮಿ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ನನ್ನ ಮಗಳು ಟೆನಿಸ್ ಪ್ಲೇಯರ್ ಆಗಬೇಕೆಂಬುದು ಅವಳ ತಂದೆಯ ಆಸೆ ಎಂದಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಈಗಲೂ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಅದಷ್ಟು ತಮ್ಮದೇ ಬ್ಯಾನರ್ ನ ಸಿನಿಮಾಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈಗ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ತಮ್ಮ ಮಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅಲ್ಲದೆ ಬಿಡುವಿನ ಸಮಯದಲ್ಲಿ ಏನು ಮಾಡುತ್ತಾರೆ ಎಂಬುದನ್ನು ಹಂಚಿಕೊಂಡಿದ್ದಾರೆ.

‘ನನ್ನ ಮಗಳು ಟೆನಿಸ್ ಪ್ಲೇಯರ್ ಆಗಬೇಕೆಂಬುದು ನನ್ನ ಮತ್ತು ಅವಳ ತಂದೆಯ ಆಸೆ. ಆದರೆ ನಾನು ಯಾವುದಕ್ಕೂ ಅವಳಿಗೆ ಫೋರ್ಸ್ ಮಾಡಲ್ಲ. ಆದರೆ ಅದೃಷ್ಟವಶಾತ್ ಅವಳೇ ಅದೇ ದಾರಿಯಲ್ಲಿದ್ದಾಳೆ. ಟೆನಿಸ್ ನಲ್ಲಿ ಅವಳಿಗೆ ಆಸಕ್ತಿಯಿದೆ. ಅವಳು ಈಗ ತಂದೆಯ ಆಸೆ ಈಡೇರಿಸುತ್ತಿದ್ದಾಳೆ’ ಎಂದಿದ್ದಾರೆ.

ಇನ್ನು, ತಮ್ಮ ಬಿಡುವಿನ ಸಮಯದಲ್ಲಿ ಕುಟುಂಬದ ಜೊತೆ ಕಾಲ ಕಳೆಯಲು ಬಯಸುತ್ತೇನೆ. ನನ್ನ ಸಹೋದರ, ತಾಯಿ, ಮಗಳು ಜೊತೆ ಬಿಡುವಿದ್ದಾಗಲೆಲ್ಲಾ ಅಲ್ಲಿ ಇಲ್ಲಿ ಟ್ರಾವೆಲ್ ಮಾಡ್ತೀನಿ. ಟೂರ್ ಮಾಡೋದು ಅಂದರೆ ನನಗೆ ತುಂಬಾ ಇಷ್ಟ ಎಂದು ಹೇಳಿಕೊಂಡಿದ್ದಾರೆ. ಇನ್ನು, ತನಗೂ ನಟನೆಯ ಆಸಕ್ತಿ ಬಂದಿದ್ದು ನನ್ನ ತಂದೆಯಿಂದ. ಅವರು ಯಕ್ಷಗಾನ ಕಲಾವಿದರಾಗಿದ್ದರು ಎಂದು ರಾಧಿಕಾ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗು ಬಂದ ಮೇಲೆ ಗಂಡನನ್ನು ಬೆಡ್ ರೂಂನಿಂದಲೇ ಹೊರಹಾಕಿದ್ದಾರಂತೆ ಅದಿತಿ ಪ್ರಭುದೇವ