Publish Date: Sat, 11 Nov 2023 (09:50 IST)
Updated Date: Sat, 11 Nov 2023 (09:53 IST)
ಬೆಂಗಳೂರು: ನಿನಗಾಗಿ ಸಿನಿಮಾ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನಸ್ಸು ಕದ್ದ ಹೀರೋಯಿನ್ ರಾಧಿಕಾ ಕುಮಾರಸ್ವಾಮಿಗೆ ಇಂದು ಜನ್ಮದಿನದ ಸಂಭ್ರಮ.
ಮಗುವಾದ ಬಳಿಕ ರಾಧಿಕಾ ಸಿನಿಮಾದಿಂದ ಕೊಂಚ ಬ್ರೇಕ್ ಪಡೆದುಕೊಂಡಿದ್ದರು. ಇದೀಗ ಕೇವಲ ನಟಿಯಾಗಿ ಮಾತ್ರವಲ್ಲ, ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.
ಇಂದು ಅವರ ಹುಟ್ಟುಹಬ್ಬದ ನಿಮಿತ್ತ ಅವರ ನಟನೆಯ ಭೈರಾದೇವಿ ಮತ್ತು ಅಜಾಗ್ರತೆ ಸಿನಿಮಾ ಪೋಸ್ಟರ್ ಗಳು ಬಿಡುಗಡೆಯಾಗುತ್ತಿವೆ. ಜೊತೆಗೆ ಇಂದು ಫ್ಯಾನ್ಸ್ ಗಾಗಿ ಸಮಯ ಮೀಸಲಿಡಲಿದ್ದಾರೆ. ಇ ದಕ್ಕಾಗಿ ತಮ್ಮನೆಯಲ್ಲಿಯೇ ಅಭಿಮಾನಿಗಳನ್ನು ಭೇಟಿ ಮಾಡುವುದಾಗಿ ಈಗಾಗಲೇ ಹೇಳಿದ್ದಾರೆ.