Select Your Language

Notifications

webdunia
webdunia
webdunia
webdunia

ರಾಧಿಕಾ ಕುಮಾರಸ್ವಾಮಿ ಸಿನಿಮಾ ನಿರ್ದೇಶಕನಿಗೆ ದುಬಾರಿ ಕಾರು ಗಿಫ್ಟ್

ರಾಧಿಕಾ ಕುಮಾರಸ್ವಾಮಿ ಸಿನಿಮಾ ನಿರ್ದೇಶಕನಿಗೆ ದುಬಾರಿ ಕಾರು ಗಿಫ್ಟ್

Sampriya

ಬೆಂಗಳೂರು , ಶನಿವಾರ, 29 ಜೂನ್ 2024 (19:58 IST)
Photo Courtesy X
ಬೆಂಗಳೂರು:  ರಾಧಿಕಾ ಕುಮಾರಸ್ವಾಮಿ ಅವರು ನಾಯಕಿಯಾಗಿ ನಟಿಸುತ್ತಿರುವ 'ಅಜಾಗ್ರತ' ಸಿನಿಮಾ ತೆರೆಗೆ ಬರುವುದಕ್ಕೂ ಮುನ್ನಾ ಸಿನಿಮಾದ ನಿರ್ದೇಶಕ ಎಂ ಶಶಿಧರ್ ಅವರಿಗೆ ನಿರ್ಮಾಪಕ ರವಿರಾಜ್ ಅವರು ದುಬಾರಿ ಕಾರನ್ನು ಗಿಫ್ಟ್ ನೀಡಿದ್ದಾರೆ.

ಈಗಾಗಲೇ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದಿದೆ.  ನಿರ್ದೇಶಕರ ಕೆಲಸ ನೋಡಿದ ರಾಧಿಕಾ ಕುಮಾರಸ್ವಾಮಿ ಸಹೋದರ, ನಿರ್ಮಾಪಕ ರವಿರಾಜ್ ಅವರು ಶಶಿಧರ್ ಅವರಿಗೆ ಫಾರ್ಚ್ಯೂನರ್ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ.

ಇನ್ನೂ ರವಿರಾಜ್ ಅವರು ನಿರ್ಮಾಣ ಮಾಡುತ್ತಿರುವ ಸಿನಿಮಾದಲ್ಲಿ ಅವರ ಸಹೋದರಿ ರಾಧಿಕಾ ಕುಮಾರಸ್ವಾಮಿ ಅವರು ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇನ್ನೂ ರಾಧಿಕಾ ಅವರಿಗೆ  ಜೋಡಿಯಾಗಿ ಬಾಲಿವುಡ್‌ನ ಖ್ಯಾತ ನಟ ಶ್ರೇಯಸ್ ತಲ್ಪಾಡೆ ಅವರು ಅಭಿನಯಿಸಿದ್ದಾರೆ.

ಇನ್ನೂ ಚಿತ್ರದ ರಫ್ ಕಾಪಿ ನೋಡಿದ ನಿರ್ಮಾಪಕ ರವಿರಾಜ್ ಅವರು ನಿರ್ದೇಶಕರ ಕೆಲಸ ನೋಡಿ ಫಿದಾ ಆಗಿದ್ದಾರೆ. ಇನ್ನೂ ಸಿನಿಮಾ ತೆರೆಗೆ ಬರುವುದಕ್ಕೂ ಮುನ್ನಾ ನಿರ್ದೇಶಕನಿಗೆ ಕಾರನ್ನು ಗಿಫ್ಟ್‌ ಆಗಿ ನೀಡಿರುವ ನಿರ್ಮಾಪಕ ರವಿರಾಜ್ ಅವರ ಗುಣ ನಿಜಕ್ಕೂ ಶ್ಲಾಘನೀಯ.

ಇನ್ನೂ ಸಿನಿಮಾದಲ್ಲಿ ಖ್ಯಾತ ನಟರಾದ ನಟ ಬಾಬಿ ಸಿಂಹ, ರಾವ್ ರಮೇಶ್‌, ಸುನೀಲ್, ಆದಿತ್ಯ ಮೆನನ್, ರಾಘವೇಂದ್ರ ಶ್ರವಣ್, ದೇವರಾಜ್, ಜಯಪ್ರಕಾಶ್, ವಿನಯಾಪ್ರಸಾದ್ ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.ಇನ್ನೂ ಈ ಸಿನಿಮಾ ತೆಲುಗು, ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೈಲಿನಲ್ಲಿ ದರ್ಶನ್ ನೋಡಿ ಕಣ್ಣೀರು ಹಾಕಿದ ರಕ್ಷಿತಾ, ಮಾಧ್ಯಮದ ಮುಂದೆ ಹೇಳಿದ್ದೇನು