Select Your Language

Notifications

webdunia
webdunia
webdunia
webdunia

ಕಾಂತಾರ ಸಿನಿಮಾಗೆ ಕೆಲಸ ಮಾಡಲಿದೆ ಈ ಹಾಲಿವುಡ್ ಟೀಂ

Kantara

Krishnaveni K

ಬೆಂಗಳೂರು , ಬುಧವಾರ, 19 ಜೂನ್ 2024 (14:48 IST)
ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ಹಾಲಿವುಡ್ ನ ಖ್ಯಾತ ಸಿನಿಮಾಗಳಿಗೆ ಕೆಲಸ ಮಾಡಿದ ತಂಡ ಕೆಲಸ ಮಾಡಲಿದೆಯಂತೆ.

ಕಾಂತಾರ ಚಾಪ್ಟರ್ 1 ಸಿನಿಮಾವನ್ನು ನಿರ್ಮಿಸುತ್ತಿರುವುದು ಹೊಂಬಾಳೆ ಫಿಲಂಸ್. ಅದ್ಧೂರಿ ಸಿನಿಮಾಗಳಿಗೆ ಹೆಸರಾಗಿರುವ ಹೊಂಬಾಳೆ ಫಿಲಂಸ್ ಕಾಂತಾರ ಚಾಪ್ಟರ್ 1 ರನ್ನು 100 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದೆ. ಈಗಾಗಲೇ ರಿಷಬ್ ತಮ್ಮ ತವರು ಕುಂದಾಪುರದಲ್ಲಿ ವಿಶೇಷ ಸೆಟ್ ಹಾಕಿಕೊಂಡು ಚಿತ್ರೀಕರಣ ಮಾಡುತ್ತಿದ್ದಾರೆ.

ಇಲ್ಲಿಯೇ ಚಿತ್ರೀಕರಣಕ್ಕೆ ವಿಶೇಷ ಸೆಟ್ ಜೊತೆಗೆ ಒಂದು ಸ್ಟುಡಿಯೋವನ್ನೂ ರಿಷಬ್ ನಿರ್ಮಿಸಿಕೊಂಡಿದ್ದಾರೆ. ಇದಕ್ಕಾಗಿ ತಮ್ಮ ಪತ್ನಿ, ಮಕ್ಕಳ ಸಮೇತ ಕುಂದಾಪುರಕ್ಕೆ ಶಿಫ್ಟ್ ಆಗಿದ್ದಾರೆ. ಇದರ ನಡುವೆ ಕಾಂತಾರ ಚಾಪ್ಟರ್ 1 ರ ಬಗ್ಗೆ ವಿಶೇಷ ಮಾಹಿತಿಯೊಂದು ಕೇಳಿಬರುತ್ತಿದೆ.

ಸಿನಿಮಾ ಐತಿಹಾಸಿಕ ಕತೆ ಹೊಂದಿರುವ ಕಾರಣ ಗ್ರಾಫಿಕ್ಸ್ ಬಳಕೆ ಅತೀ ಅಗತ್ಯವಾಗಿದೆ. ಕಾಂತಾರ ಚಾಪ್ಟರ್ 1 ಸಿನಿಮಾಗೆ ಹಾಲಿವುಡ್ ನ ಗ್ರಾಫಿಕ್ಸ್ ಟೀಂ ವಿಎಫ್ ಎಕ್ಸ್ ಮಾಡಿಕೊಡಲಿದೆಯಂತೆ. ಹಾಲಿವುಡ್ ನಲ್ಲಿ ಸೂಪರ್ ಹಿಟ್ ಆಗಿದ್ದ ಲಯನ್ ಆಂಡ್ ಕಿಂಗ್ ಸಿನಿಮಾಗೆ ಕೆಲಸ ಮಾಡಿದ್ದ ವಿಎಫ್ ಎಕ್ಸ್ ಟೀಂ ಕಾಂತಾರ ಚಾಪ್ಟರ್ 1 ಸಿನಿಮಾಗೂ ಕೆಲಸ ಮಾಡಲಿದೆ ಎಂಬ ಮಾಹಿತಿಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಅಭಿಮಾನಿಗಳಿಂದ ನಟ ಪ್ರಥಮ್ ಗೆ ಬೆದರಿಕೆ, ದೂರು ದಾಖಲು