Publish Date: Fri, 07 May 2021 (07:45 IST)
Updated Date: Fri, 07 May 2021 (07:48 IST)
ಹೈದರಾಬಾದ್ : ಇತ್ತೀಚೆಗಷ್ಟೇ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಅವರು ಜೊತೆಯಾಗಿ ಹೊಸ ಯೋಜನೆಯನ್ನು ಘೋಷಣೆ ಮಾಡಿದ್ದಾರೆ.
ಎಸ್ ಎಸ್ ಎಂಬಿ 28 ರಲ್ಲಿ ಮಹೇಶ್ ಬಾಬು ಅವರು ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಚಿತ್ರದಲ್ಲಿ ಮಹೇಶ್ ಬಾಬು ಜೊತೆ ನಟಿಸಲು ಬಾಲಿವುಡ್ ನಟ ಜಾನ್ವಿ ಕಪೂರ್ ಅವರನ್ನು ಕರೆತರಲಾಗುತ್ತಿದೆ ಎಂಬ ವದಂತಿ ಕೇಳಿಬಂದಿದೆ.
ಮಹೇಶ್ ಬಾಬು ಮತ್ತು ಜಾನ್ವಿ ಕಪೂರ ಜೋಡಿ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆಗಲಿದೆ ಎಂದು ನಿರ್ಮಾಪಕರು ಯೋಜಿಸುತ್ತಿದ್ದಾರೆ. ಹಾಗಾಗಿ ಜಾನ್ವಿ ಕಪೂರ್ ಅವರ ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.