Select Your Language

Notifications

webdunia
webdunia
webdunia
webdunia

ರಿಷಬ್ ಶೆಟ್ಟಿ ಅತ್ಯುತ್ತಮ ನಟನೆಯ ಹಿಂದಿದೆ ಈ ನಟನ ಪರಿಶ್ರಮ

Rishab Shetty Kantara

Krishnaveni K

ಬೆಂಗಳೂರು , ಶುಕ್ರವಾರ, 16 ಆಗಸ್ಟ್ 2024 (15:25 IST)
ಬೆಂಗಳೂರು: 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು ಕಾಂತಾರ ಸಿನಿಮಾದ ನಟನೆಗಾಗಿ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಅವರ ಈ ಪ್ರಶಸ್ತಿ ಹಿಂದೆ ಮತ್ತೊಬ್ಬ ಸ್ಯಾಂಡಲ್ ವುಡ್ ನಟನ ಪರಿಶ್ರಮವೂ ಇದೆ.

ರಿಷಬ್ ಶೆಟ್ಟಿ ಕಾಂತಾರ ಸಿನಿಮಾದಲ್ಲಿ ಎರಡು ಶೇಡ್ ನಲ್ಲಿ ನಟಿಸಿದ್ದಾರೆ. ಹೇಳಿದ ಮಾತು ಕೇಳದ ಪೊಗರಿನ ಕಾಡು ಬೆಟ್ಟು ಶಿವನಾಗಿ ಮತ್ತು ಎಲ್ಲರಿಗೂ ಅಭಯ ನೀಡುವ ದೈವವಾಗಿ ಅಭಿನಯಿಸಿದ್ದಾರೆ. ಎರಡೂ ಶೇಡ್ ನ ಪಾತ್ರವನ್ನೂ ಜನ ಮೆಚ್ಚಿಕೊಂಡಿದ್ದರು. ಆದರೆ ಜನರು ಮೈನವಿರೇಳುವಂತೆ ಮಾಡಿದ್ದು ದೈವದ ಪಾತ್ರ.

ಪಂಜುರ್ಲಿ ಮತ್ತು ಗುಳಿಗ ದೈವ ಮೈಮೇಲೆ ಆವಾಹಿಸಿದಂತೆ ನಟಿಸಿ ಪ್ರೇಕ್ಷಕರು ಸೀಟ್ ತುದಿಯಲ್ಲಿ ಕೂತು ನೋಡುವಂತೆ ಮಾಡಿದ್ದರು. ಸಿನಿಮಾದಲ್ಲೂ ದೈವ ಕೋಲವನ್ನು ಇಷ್ಟು ಅದ್ಭುತವಾಗಿ ತೋರಿಸಬಹುದು ಎಂದು ತೋರಿಸಿಕೊಟ್ಟರು. ಕೆಲವೇ ಕೆಲವು ಪ್ರದೇಶಕ್ಕೆ ಸೀಮಿತವಾಗಿದ್ದ ದೈವ ಕೋಲ ದೇಶದಾದ್ಯಂತ ಪರಿಚಯವಾಯಿತು.

ರಿಷಬ್ ಶೆಟ್ಟಿ ದೈವದ ಪಾತ್ರದಲ್ಲಿ ತುಳು ಭಾಷೆಯಲ್ಲಿ ಮಾತನಾಡುತ್ತಾರೆ. ರಿಷಬ್ ಕರಾವಳಿಯವರದರೂ ಅವರಿಗೆ ತುಳು ಅಷ್ಟೊಂದು ಬರಲ್ಲ. ಅವರು ಕುಂದಾಪುರದವರಾದ್ದರಿಂದ ಕುಂದಾಪುರ ಭಾಷೆಯಲ್ಲಿ ಹಿಡಿತವಿದೆ. ಆದರೆ ದೈವದ ಪಾತ್ರಕ್ಕೆ ತುಳು ಭಾಷೆಯ ಅಗತ್ಯವಿತ್ತು. ಜೊತೆಗೆ ದೈವದ ನೃತ್ಯ, ಹಾವ ಭಾವ ಎಲ್ಲದಕ್ಕೂ ಪ್ರತ್ಯೇಕತೆಯಿದೆ. ಅದಕ್ಕೆ ಕೊಂಚವೂ ಆಭಾಸವಾಗದಂತೆ ನೋಡಿಕೊಳ್ಳಬೇಕಾಗಿತ್ತು.

ಇದಕ್ಕೆ ರಿಷಬ್ ಗೆ ಸಹಾಯ ಮಾಡಿದ್ದು ನಟ ರಾಜ್ ಬಿ ಶೆಟ್ಟಿ. ಕಾಂತಾರ ಸಿನಿಮಾದ ನಿರ್ದೇಶನ ರಿಷಬ್ ಶೆಟ್ಟಿಯದ್ದು. ಆದರೆ ಕ್ಲೈಮ್ಯಾಕ್ಸ್ ನ ಮೈನವಿರೇಳಿಸುವ ದೃಶ್ಯ ಸಂಯೋಜಿಸಿದ್ದು ರಾಜ್ ಬಿ ಶೆಟ್ಟಿ. ದೈವ ಕೋಲದ ಬಗ್ಗೆ ಚೆನ್ನಾಗಿ ಅರಿವಿದ್ದ ರಾಜ್ ಬಿ ಶೆಟ್ಟಿಯೇ ರಿಷಬ್ ರನ್ನು ಆ ಅತ್ಯುತ್ತಮ ದೃಶ್ಯಕ್ಕೆ ತಯಾರು ಮಾಡಿದ್ದಾರೆ. ಅವರ ಪರಿಶ್ರಮದಿಂದಾಗಿಯೇ ಈ ದೃಶ್ಯ ಅಷ್ಟು ಚೆನ್ನಾಗಿ ಬಂದಿತ್ತು. ಇದನ್ನು ರಿಷಬ್ ಕೂಡಾ ಹೇಳಿಕೊಂಡಿದ್ದರು. ಇಂದು ರಿಷಬ್ ನ್ಯಾಷನಲ್ ಅವಾರ್ಡ್ ಪಡೆದಿರುವುದರ ಹಿಂದೆ ರಾಜ್ ಬಿ ಶೆಟ್ಟಿ ಶ್ರಮವೂ ಇದೆ ಎನ್ನಬಹುದು.

 

Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್ ಶೆಟ್ಟಿಗೆ ಇದು ಎರಡನೇ ರಾಷ್ಟ್ರ ಪ್ರಶಸ್ತಿ: ಹಿಂದೆ ಯಾವ ಸಿನಿಮಾಗೆ ಯಾವ ಪ್ರಶಸ್ತಿ ಗೆದ್ದಿದ್ದರು ಇಲ್ಲಿದೆ ವಿವರ