Webdunia - Bharat's app for daily news and videos

Install App

ಸೆಲೆಬ್ರಿಟಿಗಳಾದರೂ ಈ ತಾರೆಯರು ಪಕ್ಕಾ ಅಮ್ಮಂದಿರು

Webdunia
ಭಾನುವಾರ, 4 ಜುಲೈ 2021 (09:02 IST)
ಬೆಂಗಳೂರು: ಮಗುವಾದ ಬಳಿಕ ಎಲ್ಲಾ ಮಹಿಳೆಯರ ಜೀವನ ಮಕ್ಕಳಿಗಾಗಿ ಮೀಸಲಾಗಿರುತ್ತದೆ. ಆದರೆ ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ಬಿಟ್ಟು ತಮ್ಮದೇ ಪ್ರಪಂಚದಲ್ಲಿ ತೊಡಗಿಸಿಕೊಳ್ಳುತ್ತಾರೆ ಎನ್ನುತ್ತಾರೆ. ಆದರೆ ಕೆಲವು ತಾರೆಯರು ಇದಕ್ಕೆ ಅಪವಾದವಾಗಿದ್ದಾರೆ. ಅಂತಹ ಭಾರತೀಯ ಸೆಲೆಬ್ರಿಟಿ ಅಮ್ಮಂದಿರ ಬಗ್ಗೆ ಇಲ್ಲಿ ನೋಡೋಣ.


ಸಾನಿಯಾ ಮಿರ್ಜಾ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತ ಟೆನಿಸ್ ತಾರೆ ಎನಿಸಿಕೊಂಡಿರುವ ಸಾನಿಯಾ ಮಿರ್ಜಾ ಮಗುವಾದ ಬಳಿಕ ಕೆಲವು ದಿನಗಳ ಕಾಲ ಟೆನಿಸ್ ನಿಂದ ಬ್ರೇಕ್ ತೆಗೆದುಕೊಂಡಿದ್ದರು. ಇದಾದ ಬಳಿಕ ಕಠಿಣ ಪರಿಶ್ರಮ ಪಟ್ಟು ತಮ್ಮ ತೂಕ ಇಳಿಸಿಕೊಂಡು ಕಣಕ್ಕೆ ಮರಳಿದ್ದಾರೆ. ಹಾಗಿದ್ದರೂ ತಾವು ಆಡುವಾಗಲೂ ಮಗ ಇಝಾನ್ ನ್ನು ಜೊತೆಗೇ ಕರೆದೊಯ್ಯುತ್ತಾರೆ.

ಐಶ್ವರ್ಯಾ ರೈ ಬಚ್ಚನ್: ಮದುವೆಯಾದ ಬಳಿಕವೂ ಐಶ್ವರ್ಯಾ ಅಭಿನಯ ಮುಂದುವರಿಸಿದ್ದಾರೆ. ಆದರೆ ಅವರ ಮೊದಲ ಆಯ್ಕೆ ಮಗಳು. ಮಗಳಿಗಾಗಿ ಇತ್ತೀಚೆಗೆ ತೆರೆಯ ಮೇಲೆ ಕಾಣಿಸಿಕೊಳ್ಳುವುದೇ ಅಪರೂಪವಾಗಿದೆ. ಎಲ್ಲೇ ಹೋದರೂ ಮಗಳ ಕೈ ಹಿಡಿದುಕೊಂಡು ಜೊತೆಯಲ್ಲೇ ಕರೆದೊಯ್ಯುತ್ತಾರೆ.

ರಾಧಿಕಾ ಪಂಡಿತ್: ಇಬ್ಬರು ಮಕ್ಕಳ ತಾಯಿಯಾದ ಮೇಲೆ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಅಭಿನಯದಿಂದ ದೂರವಾಗಿದ್ದಾರೆ. ತಮ್ಮಿಬ್ಬರು ಮುದ್ದು ಮಕ್ಕಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಾ ಅಭಿಮಾನಿಗಳಿಗೆ ಖುಷಿಕೊಡುತ್ತಾರೆ. ಆದರೆ ಮಕ್ಕಳು ಒಂದು ಹಂತಕ್ಕೆ ಬರುವವರೆಗೂ ಅಭಿನಯದ ಕಡೆ ಮುಖ ಮಾಡಲ್ಲ ಎಂದಿದ್ದಾರೆ.

ಶ್ವೇತಾ ಶ್ರೀವಾತ್ಸವ್: ಸ್ಯಾಂಡಲ್ ವುಡ್ ನ ಈ ನಟಿಯಷ್ಟೇ ಅವರ ಮಗಳೂ ಫೇಮಸ್. ಮಗುವಾದ ಮೇಲೆ ಬ್ರೇಕ್ ತೆಗೆದುಕೊಂಡಿರುವ ಶ್ವೇತಾ ಪಕ್ಕಾ ಅಮ್ಮನಾಗಿದ್ದಾರೆ.

ವಿರುಷ್ಕಾ ದಂಪತಿ: ಮಗಳು ವಮಿಕಾ ಹುಟ್ಟಿದ ಮೇಲೆ ವಿರಾಟ್-ಅನುಷ್ಕಾ ದಂಪತಿ ಇನ್ನಿಲ್ಲದಂತೇ ಜೋಪಾನ ಮಾಡುತ್ತಿದ್ದಾರೆ. ಅನುಷ್ಕಾ ಸದ್ಯಕ್ಕೆ ಸಿನಿಮಾಗಳಿಂದ ದೂರವಾಗಿದ್ದಾರೆ. ಪತಿ ವಿರಾಟ್ ಜೊತೆ ಎಲ್ಲಾ ಕ್ರಿಕೆಟಿಂಗ್ ಪ್ರವಾಸದ ವೇಳೆ ಮಗಳನ್ನು ಜೊತಗೇ ಕರೆದೊಯ್ಯುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments