Select Your Language

Notifications

webdunia
webdunia
webdunia
webdunia

ವಂಡಲೂರು ಮೃಗಲಾಯದಲ್ಲಿ ಶಿವಕಾರ್ತೀಕೇಯನ್ ದತ್ತು ಪಡೆದಿದ್ದ ಸಿಂಹ ಕೊನೆಗೂ ಪತ್ತೆ

Actor Shivakartikeyan

Sampriya

ಚೆನ್ನೈ , ಸೋಮವಾರ, 6 ಅಕ್ಟೋಬರ್ 2025 (20:19 IST)
Photo Credit X
ಚೆನ್ನೈ: ತಮಿಳು ನಟ ಶಿವಕಾರ್ತೀಕೇಯನ್ ಅವರು ತಮಿಳುನಾಡಿನ ವಂಡಲೂರು ಮೃಗಾಲಯದಲ್ಲಿ ದತ್ತು ಪಡೆದಿದ್ದ ಸಿಂಹವೊಂದು ನಾಪತ್ತೆಯಾಗಿ ಆತಂಕ ಸೃಷ್ಟಿಯಾಗಿತ್ತು. ಇದೀಗ 2‌ ದಿನಗಳ ಬಳಿಕ ಸಿಂಹ ಪತ್ತೆಯಾಗಿದ್ದು, ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಆರು ವರ್ಷದ ಗಂಡು ಸಿಂಹ ಶೆರ್ಯಾರ್ ಅನ್ನು ಗುರುವಾರ ಸಫಾರಿ ವಲಯಕ್ಕೆ ಬಿಟ್ಟ ಬಳಿಕ ತನ್ನ ಆವರಣಕ್ಕೆ ಹಿಂತಿರುಗದಿದ್ದಾಗ ಅಧಿಕಾರಿಗಳಿಗೆ ಮಾಹಿತಿ ನೀಡಿತು. ಶನಿವಾರ ಸಂಜೆಯವರೆಗೂ ಸಿಂಹ ಆವರಣಕ್ಕೆ ಹಿಂತಿರುಗಿಲ್ಲ. ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಸಿಂಹವನ್ನು ವಂಡಲೂರಿಗೆ ತರಲಾಯಿತು. ಸಿಂಹ ಸಫಾರಿ ವಲಯದಲ್ಲಿ ಪ್ರಸ್ತುತ ಆರು ಸಿಂಹಗಳಿವೆ. ಇವುಗಳಲ್ಲಿ ಎರಡನ್ನು ಮಾತ್ರ ಸಂದರ್ಶಕರು ವೀಕ್ಷಿಸಲು ಅನುಮತಿಸಲಾಗಿದೆ. ಉಳಿದವು ಪಂಜರದಲ್ಲಿವೆ.

ಸಿಂಹದ ಪತ್ತೆಗೆ ಮುಖ್ಯ ವನ್ಯಜೀವಿ ವಾರ್ಡನ್ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆಯನ್ನು ನೇಮಿಸಲಾಗಿದೆ. ಐದು ತಂಡಗಳು ವಿಶೇಷ ತಪಾಸಣೆ ಆರಂಭಿಸಿವೆ. ಸಫಾರಿ ಪ್ರದೇಶದಿಂದ ಪ್ರವಾಸಿಗರನ್ನು ನಿಷೇಧಿಸಲಾಗಿದೆ. 

ಆತಂಕ ಪಡುವ ಅಗತ್ಯವಿಲ್ಲ ಎಂದು ಮೃಗಾಲಯದ ನಿರ್ದೇಶಕ ರಿಟ್ಟೊ ಸಿರಿಯಾಕ್ ಹೇಳಿದ್ದಾರೆ. ಸಫಾರಿ ಪ್ರದೇಶದ ಸುತ್ತಲೂ ಎತ್ತರದ ಸುತ್ತುಗೋಡೆ ಮತ್ತು ತಂತಿಬೇಲಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದರು. 

Share this Story:

Follow Webdunia kannada

ಮುಂದಿನ ಸುದ್ದಿ

ಸೋಮವಾರದ್ ಮೇಲ್ ನೋಡ್ರೀ, ಹೆಂಗ್ ಬಿದ್ದೋಗುತ್ತೆ ಅಂದೋರಿಗೆ: ದುನಿಯಾ ವಿಜಯ್‌ ಹೀಗಂದಿದ್ಯಾಕೆ