Select Your Language

Notifications

webdunia
webdunia
webdunia
webdunia

ದಿ ವಿಲನ್ ಚಿತ್ರದಲ್ಲಿ ಕನ್ನಡ ಧ್ವಜದ ಬಣ್ಣಕ್ಕೆ ಅವಮಾನ -ಕನ್ನಡಪರ ಒಕ್ಕೂಟಗಳ ಆರೋಪ

ಅವಮಾನ
ಬೆಂಗಳೂರು , ಸೋಮವಾರ, 12 ನವೆಂಬರ್ 2018 (07:15 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ‘ದಿ ವಿಲನ್’ ಚಿತ್ರ ಶುರುವಾಗಿದ್ದಾಗಿನಿಂದ ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸುತ್ತಿತ್ತು. ಇದೀಗ ಮತ್ತೊಂದು ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡಿದೆ.


ಹೌದು. ಈ ಹಿಂದೆ ಈ ಸಿನಿಮಾದ ಆ್ಯಕ್ಷನ್ ಸೀನ್ ವೊಂದರಲ್ಲಿ ಶಿವರಾಜ್ ಕುಮಾರ್ ಅವರಿಗೆ ಸುದೀಪ್ ಹೊಡೆದಿದ್ದಾರೆ ಅಂತಾ ಶಿವರಾಜ್ ಕುಮಾರ್ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಇದೀಗ ಕನ್ನಡಕ್ಕೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.


ಈ ಸಿನಿಮಾದ ದೃಶ್ಯವೊಂದರಲ್ಲಿ ಸುದೀಪ್ ಧರಿಸಿರೋ ಚಡ್ಡಿಯ ಬಣ್ಣ ಕೆಂಪು, ಹಳದಿ ಬಣ್ಣದಲ್ಲಿತ್ತು. ಇದು ಕನ್ನಡಪರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದು, ಕನ್ನಡ ಧ್ವಜದ ಬಣ್ಣಕ್ಕೆ ಅವಮಾನ ಮಾಡಿದ್ದಾರೆ ಎನ್ನಲಾಗುತ್ತಿದೆ‌. ಇದೀಗ ಸುದೀಪ್ ಹಾಗೂ ಪ್ರೇಮ್ ಕನ್ನಡಿಗರಲ್ಲಿ ಕ್ಷಮೆ ಕೋರಬೇಕೆಂದು ಕನ್ನಡಪರ ಒಕ್ಕೂಟಗಳ ನಾಗೇಶ್ ಒತ್ತಾಯ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಐಎಡಿಎಂಕೆ ಪಕ್ಷ ವಿಜಯ್ ‘ಸರ್ಕಾರ್’ ಚಿತ್ರವನ್ನು ವಿರೋಧಿಸಿದಕ್ಕೆ ನಟನ ಅಭಿಮಾನಿಗಳು ಮಾಡಿದ್ದೇನು ಗೊತ್ತಾ?