ವಾಲ್ಮೀಕಿಗೆ ಅವಮಾನ ಖಂಡಿಸಿ ಹೋರಾಟ

ಮಂಗಳವಾರ, 6 ನವೆಂಬರ್ 2018 (15:19 IST)
ನಾಯಕ ಸಮಾಜ ಹಾಗೂ ಮಹರ್ಷಿ ವಾಲ್ಮೀಕಿ ಬಗ್ಗೆ ಅವಹೇಳನಕಾರಿಯಾಗಿ ಬೈಯ್ದಿರುವ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ನಾಯಕರ ಯುವಕರ ಸಂಘದಿಂದ ಪ್ರತಿಭಟನೆ ನಡೆದಿದೆ.

ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ ನಾಯಕರ ಯುವಕರ ಸಂಘದ ಸದಸ್ಯರು, ಪವಿತ್ರ ಗ್ರಂಥವಾದ ಶ್ರೀರಾಮಾಯಣ ಕೃತಿಯ ಕತೃಗಳಾದ ಶ್ರೀ ಮಹರ್ಷಿ ವಾಲ್ಮೀಕಿಯವರ ಬಗ್ಗೆ ಹಾಗೂ ನಾಯಕ ಜನಾಂಗದ ಬಗ್ಗೆ ದನಗಾಯಿ ಯುವಕರು ಬೈಯ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಖಂಡನಾರ್ಹ.

ಸಾಮಾಜಿಕ ಜಾಲತಾಣಕ್ಕೆ ಬಿಡುಗಡೆ ಮಾಡಿರುವ ಎಲ್ಲರ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿ ಶೀಘ್ರ ಬಂಧಿಸಿ, ಗಡಿಪಾರು ಮಾಡುವ ಮೂಲಕ ನಾಯಕ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಜಮಖಂಡಿಯಲ್ಲಿ ಆನಂದ್ ಗೆ ಮಹಾದಾನಂದ: ಕೈ ಹಿಡಿದ ಅನುಕಂಪ