ಕಾಂತಾರ ಸೀಕ್ವೆಲ್‌ನಲ್ಲಿ ಕಾಣಿಸಿಕೊಂಡಿದ್ದ ಕಂಬಳ ಕೋಣ ಇನ್ನಿಲ್ಲ

Sampriya
ಶನಿವಾರ, 9 ಆಗಸ್ಟ್ 2025 (15:00 IST)
Photo Credit X
ಉಡುಪಿ: ನಟ ರಿಷಬ್ ಶೆಟ್ಟಿ ನಿರ್ದೇಶಿಸಿ, ಅಭಿನಯಿಸಿರುವ ಕಾಂತಾರ ಸಿನಿಮಾದಲ್ಲಿ ಕಂಬಳ ಹಾಗೂ ಕೆಲ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದ ಅಪ್ಪು ಕೋಣ ಸಾವನ್ನಪ್ಪಿದೆ. ಬೈಂದೂರು ಬೊಳಂಬಳ್ಳಿಯ ಕಂಬಳ ಪ್ರೇಮಿ ಪರಮೇಶ್ವರ ಭಟ್ ಅವರು ಅಪ್ಪು ಕೋಣವನ್ನು ಸಾಕಿದ್ದರು. 

ಕರಾವಳಿ ಕಂಬಳದಲ್ಲಿ ಭಾರೀ ಮೆಡಲ್‌ಗಳನ್ನು ಈ ಕೋಣ ಬಾಚಿಕೊಂಡಿತ್ತು. ಕಂಬಳ ದೃಶ್ಯ ಹಾಗೂ ಕೊಟ್ಟಿಗೆಯ ದೃಶ್ಯದದಲ್ಲಿ ಅಪ್ಪು ಕೋಣ ಕಾಣಿಸಿಕೊಂಡಿತ್ತು. ಪರಮೇಶ್ವರ ಭಟ್‌ರ ಮಗಳಾದ ಚೈತ್ರಾ ಪರಮೇಶ್ವರ ಭಟ್ ಅವರ ಆರೈಕೆಯಲ್ಲಿ ಅಪ್ಪು ಮತ್ತು ಕಾಳ ಎನ್ನುವ ಕೋಣಗಳು ಬೆಳೆದಿದ್ದವು.

ಕಾಂತಾರ ಚಿತ್ರದಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಜೊತೆ ತೆರೆಯಲ್ಲಿ ಮಿಂಚಿತ್ತು. ಚಿತ್ರೀಕರಣಕ್ಕೆ ಅಪ್ಪು ಮತ್ತು ಕಾಳ ಎನ್ನುವ ಕೋಣಗಳ ಮೂಲಕ ತರಬೇತಿ ನೀಡಲಾಗಿತ್ತು. ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅಪ್ಪು ಕೋಣ ನಿಧನಕ್ಕೆ ಫ್ಯಾನ್ಸ್ ಕಂಬನಿ  ಮಿಡಿದಿದ್ದಾರೆ. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟಿ ಶಿಲ್ಪಾಗೆ ಮುಗಿಯದ ಸಂಕಷ್ಟ, ತಾಯಿ ಸುನಂದಾ ಶೆಟ್ಟಿ ಆಸ್ಪತ್ರೆಗೆ ದಾಖಲು

ಸುಶಾಂತ್ ಸಿಂಗ್‌ನದ್ದು ಆತ್ಮಹತ್ಯೆಯಲ್ಲ ಇಬ್ಬರಿಂದ ಕೊಲೆ ನಡೆದಿದೆ: ಸಹೋದರಿ ಶ್ವೇತಾ ಸಿಂಗ್‌

ವಧು ವರರ ಲುಕ್‌ನಲ್ಲಿ ದರ್ಶನ್, ಪವಿತ್ರಾ ಗೌಡ, ವೈರಲ್ ಫೋಟೋ ಹಿಂದಿನ ಗುಟ್ಟು ಇದೇನಾ

ದರ್ಶನ್ ಆಂಡ್ ಗ್ಯಾಂಗ್ ಗೆ ತಾತ್ಕಾಲಿಕ ರಿಲೀಫ್: ದೋಷಾರೋಪಪಟ್ಟಿ ಮುಂದೂಡಿಕೆ

ಮಗ ವಿನೀಶ್ ಹುಟ್ಟುಹಬ್ಬದಂದೇ ದರ್ಶನ್ ಗೆ ಅಗ್ನಿಪರೀಕ್ಷೆ: ದಾಸನಿಗೆ ಎದೆಯಲ್ಲಿ ಢವ ಢವ

ಮುಂದಿನ ಸುದ್ದಿ
Show comments