Webdunia - Bharat's app for daily news and videos

Install App

ಬಿಗ್‌ಬಾಸ್‌ಗೆ ನೀವು ಹಾಕಿದ ಶ್ರಮಕ್ಕೆ ಸರಿಸಾಟಿಯೇ ಇಲ್ಲ: ಸಾನ್ವಿ ಸುದೀಪ್

Sampriya
ಸೋಮವಾರ, 14 ಅಕ್ಟೋಬರ್ 2024 (16:22 IST)
Photo Courtesy X
ಬಿಗ್‌ಬಾಸ್ 11ನೇ ಸೀಸನ್ ಮುನ್ನಡೆಸುತ್ತಿರುವ ಕಿಚ್ಚ ಸುದೀಪ್ ಅವರು ಮುಂದಿನ ಸೀಸನ್‌ನಿಂದ ನಿರೂಪಣೆ ಮಾಡಲ್ಲ ಎಂದು ವಿದಾಯ ಘೋಷಣೆ ಮಾಡಿದ್ದಾರೆ. ಇನ್ನು ಸುದೀಪ್ ಅವರ ಈ ನಿರ್ಧಾರ ಬಿಗ್‌ಬಾಸ್ ಪ್ರಿಯರಲ್ಲಿ ಭಾರೀ ನೋವು ತಂದಿದೆ. ಇದೀಗ ತಂದೆಯ ನಿರ್ಧಾರದ ಬಗ್ಗೆ ಪುತ್ರಿ ಸಾನ್ವಿ ಸುದೀಪ್ ಅವರು ಪೋಸ್ಟ್ ಮಾಡಿದ್ದಾರೆ.

ಬಿಗ್ ಬಾಸ್ ಶೋಗಾಗಿ ನೀವು ಹಾಕಿದ ಶ್ರಮಕ್ಕೆ ಸರಿಸಾಟಿಯೇ ಇಲ್ಲ ಎಂದು ಸಾನ್ವಿ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಸ್ಟೋರಿಸ್‌ನಲ್ಲಿ ಬರೆದುಕೊಂಡಿದ್ದಾರೆ.

ಅಪ್ಪ ನಿಮ್ಮ ಬಿಗ್ ಬಾಸ್ ಜರ್ನಿ ಅತ್ಯಂತ ಹೆಮ್ಮೆ ಪಡುವಂತದ್ದು, ಬೇರೆ ಯಾರು ನಿಮ್ಮ ರೀತಿ ಮಾಡಲು ಸಾಧ್ಯವಿಲ್ಲ. ಬಿಗ್ ಬಾಸ್ ವೇದಿಕೆ ಮೇಲೆ ನಿಮ್ಮನ್ನು ನಾವು ನೋಡಲು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಆದರೆ ಬಿಗ್ ಬಾಸ್ ಜರ್ನಿಯಲ್ಲಿ ನಿಮ್ಮನ್ನು ನೋಡಿದ್ದು ನನಗೆ ಅತ್ಯಂತ ಸಂತೋಷವನ್ನು ತಂದಿದೆ. 'ಬಿಗ್ ಬಾಸ್' ಶೋಗಾಗಿ ನೀವು ಹಾಕಿದ ಶ್ರಮಕ್ಕೆ ಸರಿಸಾಟಿಯೇ ಇಲ್ಲ. ಇಲ್ಲಿವರೆಗೂ ಬಿಗ್ ಬಾಸ್ ಶೋಗೆ ನೀವು ನೀಡಿರುವ ಕೊಡುಗೆಗೆ ನಾನು ಹೆಮ್ಮೆ ಪಡುತ್ತೇನೆ ಎಂದು ತಂದೆಯ ಬಗ್ಗೆ ಸಾನ್ವಿ ಸುದೀಪ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಸೀಸನ್ 11 ಅನ್ನು ಕೂಡಾ ಸುದೀಪ್ ಅವರು ನಡೆಸುಕೊಡುವ ಭಾರೀ ಚರ್ಚೆಯಾಗಿತ್ತು. ಈ ಬಾರಿಯ ನಿರೂಪಣೆಯಿಂದ ಕಿಚ್ಚ ಸುದೀಪ್ ಹೊರಗೆ ಉಳಿತಯುತ್ತಾರೆಂಬ ವದಂತಿ ಬಿಗ್‌ಬಾಸ್ ಪ್ರಿಯರಿಗೆ ಶಾಕ್ ನೀಡಿತ್ತು. ಆದರೆ ವಾಹಿನಿ ಹಾಗೂ ಅಭಿಮಾನಿಗಳ ಒತ್ತಾಯದ ಮೇರೆಗೆ ಸುದೀಪ್ ಅವರು 11ಸೀಸನ್ ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡರು.

ಸೀಸನ್ 11 ಆರಂಭದಲ್ಲೇ ಮುಂದಿನ ಸೀಸನ್‌ನಿಂದ ಬಿಗ್‌ಬಾಸ್ ಶೋ ತಾನು ನಡೆಸಿಕೊಡಲ್ಲ ಎಂದು ಕಿಚ್ಚ ಸುದೀಪ್ ಅವರು ಘೋಷಣೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

IPL 2025 ಸೋಲಿನ ಬಗ್ಗೆ ಕೊನೆಗೂ ಭಾವುಕ ಪೋಸ್ಟ್ ಹಂಚಿಕೊಂಡ ಪಂಜಾಬ್ ಒಡತಿ ಪ್ರೀತಿ ಜಿಂಟಾ

Road Accident: ಕಣ್ಣೆದುರೇ ತಂದೆಯನ್ನು ಕಳೆದುಕೊಂಡ ನಟ ಶೈನ್ ಟಾಮ್ ಚಾಕೊ

Akhil Akkineni Marriage: ಟ್ರೆಂಡಿಂಗ್‌ನಲ್ಲಿದೆ ನಾಗರ್ಜುನ ಮಗನ ಮದುವೆ ಫೋಟೋಗಳು

ಡಿವೋರ್ಸ್ ಬೆನ್ನಲ್ಲೇ ಮತ್ತೇ ಗೆಳತಿ ಜತೆ ಜೋಡಿಯಾಗಿ ಕಾಣಿಸಿಕೊಂಡ ನಟ ಜಯಂ ರವಿ, ಇದು ಅದೇ ಎಂದ ನೆಟ್ಟಿಗರು

Rakshit Shetty Birthday: ಫ್ರೆಂಡ್ ಗೆ ಗುಡ್ ನ್ಯೂಸ್ ಕೊಡಕ್ಕೆ ಹೇಳಿ ರಿಷಭ್ ಶೆಟ್ರೇ...

ಮುಂದಿನ ಸುದ್ದಿ
Show comments