Select Your Language

Notifications

webdunia
webdunia
webdunia
webdunia

ಚಿರಂಜೀವಿಯವರ ಲೂಸಿಫರ್ ನ ರಿಮೇಕ್ ಚಿತ್ರಕ್ಕೆ ರಾಯಲ್ ಬಿರುದು ಕೊಟ್ಟ ಚಿತ್ರತಂಡ

ಚಿರಂಜೀವಿಯವರ ಲೂಸಿಫರ್ ನ ರಿಮೇಕ್ ಚಿತ್ರಕ್ಕೆ ರಾಯಲ್ ಬಿರುದು ಕೊಟ್ಟ ಚಿತ್ರತಂಡ
ಹೈದರಾಬಾದ್ , ಗುರುವಾರ, 1 ಏಪ್ರಿಲ್ 2021 (11:11 IST)
ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ ಅವರು ಆಚಾರ್ಯ ಚಿತ್ರದಲ್ಲಿ ನಟಿಸುತ್ತಿದ್ದು, ಇದರ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಕೊರಟಾಲ ಶಿವ ನಿರ್ದೇಶನದ ಈ ಚಿತ್ರದ ಶೂಟಿಂಗ್ ಏಪ್ರಿಲ್ ನಲ್ಲಿ ಮುಕ್ತಾಯಗೊಂಡು ಮೇ 13ರಂದು ಬಿಡುಗಡೆಯಾಗಲಿದೆ.

ಇತ್ತೀಚಿನ ಮಾಹಿತಿ ಪ್ರಕಾರ ಆಚಾರ್ಯ ಚಿತ್ರ ಪೂರ್ಣಗೊಂಡ ಬಳಿಕ ಚಿರಂಜೀವಿ ಮತ್ತುಂದು ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಚಿತ್ರ ಮಲಯಾಳಂ ಸೂಪರ್ ಹಿಟ್ ಚಿತ್ರ ಲೂಸಿಫರ್ ನ ರಿಮೇಕ್ ಆಗಿದೆ. ಮೋಹನ್ ರಾಜ್ ಅವರು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ಇದೀಗ ಈ ಚಿತ್ರಕ್ಕೆ ರಾರಾಜು ಎಂಬ ರಾಯಲ್ ಬಿರುದು ಸಿಕ್ಕಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಹಿರಂಗಗೊಂಡಿಲ್ಲ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

'ವಕೀಲ ಸಾಬ್' ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮಕ್ಕೆ ಸರ್ಕಾರದಿಂದ ತಡೆ