ದೇಶದ ಗಾಯನ ಲೋಕದ ಮೇರು ಪ್ರತಿಭೆ ಪಂಡಿತ್ ಜಸ್ ರಾಜ್ ಇಹಲೋಕ ಯಾತ್ರೆ ಮುಗಿಸಿದ್ದಾರೆ.
ದೇಶದಲ್ಲಿ ಶಾಸ್ತ್ರೀಯ ಸಂಗೀತ ಲೋಕದ ದಂತಕಥೆ ಎಂದೇ ಪಂಡಿತ್ ಜಸ್ ರಾಜ್ ಖ್ಯಾತರಾಗಿದ್ದರು.
90 ವರ್ಷದ ಪದ್ಮವಿಭೂಷಣ ಜಸ್ ರಾಜ್ ಅವರು ಅಮೆರಿಕಾದ ನ್ಯೂಜರ್ಸಿಯಲ್ಲಿದ್ದರು ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಸಾಕಷ್ಟು ಹೆಸರನ್ನು ಜಸ್ ರಾಜ್ ಮಾಡಿದ್ದರು.