Publish Date: Sun, 09 Aug 2020 (22:11 IST)
Updated Date: Sun, 09 Aug 2020 (22:13 IST)
ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕರೊಬ್ಬರು ನಿಧನ ಹೊಂದಿದ್ದಾರೆ.
ಕಲಬುರಗಿ ಗ್ರಾಮೀಣ ಮತಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿದ್ದ ಜಿ.ರಾಮಕೃಷ್ಣ ಅನಾರೋಗ್ಯದಿಂದಾಗಿ ಇನ್ನಿಲ್ಲವಾಗಿದ್ದಾರೆ.
ಎಂ.ವೀರಪ್ಪ ಮೊಯ್ಲಿ ಅವರ ಆಡಳಿತ ಅವಧಿಯಲ್ಲಿ ಜಿ.ರಾಮಕೃಷ್ಣ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು.
84 ವರ್ಷದ ಜಿ.ರಾಮಕೃಷ್ಣ ಕಲಬುರಗಿಯಲ್ಲಿನ ಅವರ ನಿವಾಸದಲ್ಲಿ ಮೃತರಾಗಿದ್ದಾರೆ.