Select Your Language

Notifications

webdunia
webdunia
webdunia
Sunday, 13 April 2025
webdunia

ಅಪ್ಪು ಅಭಿಮಾನಿಗಳ ಸಾವಿನ ಸರಣಿ!

ಸ್ಯಾಂಡಲ್‍ವುಡ್
ತುಮಕೂರು , ಶುಕ್ರವಾರ, 5 ನವೆಂಬರ್ 2021 (16:12 IST)
ತುಮಕೂರು :  ಅಪ್ಪು ಎಂದೇ ಅಭಿಮಾನಿಗಳಿಂದ ಕರೆಸಿಕೊಂಡಿದ್ದ ನಟ ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಸಾವಿನ ಸರಣಿ ಮುಂದುವರಿದಿದೆ.
ಪುನಿತ್ ರಾಜಕುಮಾರ್ ಮೃತಪಟ್ಟ ದಿನದಿಂದ ಊಟ ಬಿಟ್ಟಿದ್ದ ತುಮಕೂರು ತಾಲೂಕಿನ ಅರೆಗುಜ್ಜನಹಳ್ಳಿಯ ಅಭಿಮಾನಿ ಸಾವನ್ನಪ್ಪಿದ್ದಾರೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಪಟ್ಟಣದ ಭೀಮ ನಗರದ ನಿವಾಸಿ ಪುನೀತ್ ಅಪ್ಪಟ ಅಭಿಮಾನಿಯಾಗಿದ್ದ ವಿಡಿಯೋಗ್ರಾಫರ್ ಶಿವಮೂರ್ತಿ ಎಂಬವರು ಕೂಡ ಮೃತಪಟ್ಟಿದ್ದಾರೆ. ಇಂದು ನವೆಂಬರ್ 5 ಇಬ್ಬರು ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ತುಮಕೂರು ತಾಲೂಕಿನ ಅರೆಗುಜ್ಜನಹಳ್ಳಿಯಲ್ಲಿ ರವಿಕುಮಾರ್ (27) ಎಂಬವರು ಮೃತಪಟ್ಟ ದುರ್ಘಟನೆ ನಡೆದಿದೆ. ಮನೆ ತುಂಬಾ ಅಪ್ಪು ಫೋಟೋ ಅಂಟಿಸಿಕೊಂಡಿರುವ ರವಿಕುಮಾರ್, ಪುನೀತ್ ರಾಜ್ಕುಮಾರ್ ಅಂತಿಮ ದರ್ಶನ ಪಡೆದು ಮನೆಗೆ ಹಿಂತಿರುಗಿದ್ದರು. ಬಂಡೆ ಕೆಲಸ ಮಾಡುತ್ತಿದ್ದ ರವಿಕುಮಾರ್ ಬಳಿಕ, ದೊಡ್ಡಮನೆ ಅಪ್ಪು ಅವರೇ ಇಲ್ಲ ನಾನಿದ್ದು ಏನು ಪ್ರಯೋಜನ ಎಂದು ಹೇಳಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ. ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಸಂಗೀತ ಸಂಯೋಜಕ ವಿ ಹರಿಕೃಷ್ಣ ಹುಟ್ಟು ಹಬ್ಬ