Publish Date: Fri, 05 Nov 2021 (13:23 IST)
Updated Date: Fri, 05 Nov 2021 (13:25 IST)
ದಿವಂಗತ ಪುನೀತ್ ರಾಜ್ಕುಮಾರ್ ಸಮಾಧಿ ಬಳಿ ಅಭಿಮಾನಿಗಳ ದಂಡೇ ಹರಿದು ಬರುತ್ತಿದೆ.
ಇನ್ನು ತುಮಕೂರಿನ ಮಧುಗಿರಿಯಿಂದ ಕಂಠೀರವ ಸ್ಟುಡಿಯೋಗೆ ವಿಶೇಷ ಚೇತನ ಅಪ್ಪು ಫ್ಯಾನ್ ಬಂದಿದ್ದಾನೆ. ಅಪ್ಪು ಅಂದರೆ ನಮಗೆ ತುಂಬಾ ಇಷ್ಟ.. ಅವರ ಎಲ್ಲಾ ಸಿನಿಮಾಗಳನ್ನು ನೋಡಿದ್ದೀನಿ..ಈ ಹಿಂದೆ ಸದಾಶಿವ ನಗರ ಮನೆ ಹತ್ರ ಹೋಗಿದ್ದಾಗ ನನ್ನನ್ನು ಮೀಟ್ ಮಾಡಿ ಮಾತಾಡಿಸಿದ್ರು.. ಅವರ ರಾಜಕುಮಾರ ಸಿನಿಮಾ ನಂಗೆ ತುಂಬಾ ಇಷ್ಟ..ಆದರೆ ಈಗ ಅವರು ಇಲ್ಲದೇ ಇರುವುದು ಅರಗಿಸಿಕೊಳ್ಳಲಾಗದ ಸ್ಥಿತಿಗೆ ಬಂದಿದ್ದೇವೆ ಅಂತ ತಿಳಿಸಿದ್ರು. ಇನ್ನು ರಾಜಕುಮಾರ ಸಿನಿಮಾದ ಬೊಂಬೆ ಹೇಳುತೈತೆ ಹಾಡು ಹೇಳಿ ವಿಶೇಷ ಚೇತನ ಹನುಮಂತ ರಾಯಪ್ಪ ಭಾವುಕರಾಗಿದ್ದಾರೆ..