ಅನುಬಂಧ ಅವಾರ್ಡ್‌ ಆರಂಭಕ್ಕೆ ಕ್ಷಣಗಣನೆ, ಈ ಬಾರಿ ಏನೆಲ್ಲ ವಿಶೇಷತೆ ಇರಲಿದೆ

Sampriya
ಶುಕ್ರವಾರ, 20 ಸೆಪ್ಟಂಬರ್ 2024 (16:49 IST)
Photo Courtesy X
ಬೆಂಗಳೂರು: ಇಂದು ಸಂಜೆ 7ರಿಂದ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಅನುಬಂಧ ಅವಾರ್ಡ್‌2024 ಪ್ರಸಾರವಾಗಲಿದೆ. ಈಗಾಗಲೇ ಕಾರ್ಯಕ್ರಮದ ಪ್ರೋಮೋ ನೋಡಿ ಸೀರಿಯಲ್ ಪ್ರಿಯರು ಫಿದಾ ಆಗಿದ್ದು, ಇದೀಗ ಕಾರ್ಯಕ್ರಮ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ.

ಅನುಬಂಧ ಅವಾರ್ಡ್‌ ಕಳೆದ 10ವರ್ಷಗಳಿಂದ ಅದ್ಧೂರಿಯಾಗಿ ನಡೆಯುತ್ತಾ ಬರುತ್ತಿದೆ.  ಈ ಬಾರಿ ವಿಶೇಷ ಎಂಬಂತೆ 11 ಆ್ಯಂಕರ್‌ಗಳು ಈ ಕಾರ್ಯಕ್ರಮವನ್ನು ನಡೆಸಿಕೊಡಲಿರುವುದು.

ಸಿನಿಮಾ ರಂಗದ ಹಾಗೇ ಕಿರುತೆರೆಯಲ್ಲೂ ಮನಮೆಚ್ಚಿದ ಸೀರಿಯಲ್‌ ಅನ್ನು ಗುರುತಿಸಿ ಅವಾರ್ಡ್ ನೀಡಲಾಗುತ್ತದೆ. ಈ ಮೂಲಕ ಕಲಾವಿದರಿಗೆ ಪ್ರೋತ್ಸಾಹಿಸಲಾಗುತ್ತದೆ.

ಕಿರುತೆರೆ ಲೋಕದಲ್ಲಿ ಹಬ್ಬದ ರೀತಿಯೇ ಮೂಡಿಬರುತ್ತಿರುವ ಅನುಬಂಧದಲ್ಲಿ ಸಿನಿಮಾ ನಾಯಕ, ನಾಯಕಿಯರು, ಸ್ಟಾರ್‌ ನಿರ್ದೇಶಕರು ಭಾಗವಹಿಸಿ, ವಿಜೇತರಿಗೆ ಪ್ರಶಸ್ತಿ ನೀಡುತ್ತಾರೆ. ಜನ ವೋಟ್ ಮೂಲಕ ತಮ್ಮ ನೆಚ್ಚಿನ ನಟ, ನಟಿ, ಪೋಷಕ ಪಾತ್ರಗಳನ್ನು ಆಯ್ಕೆ ಮಾಡಿದ್ದು, ಅದರ ಅನುಸಾರ ಪ್ರಶಸ್ತಿ ಸಿಗಲಿದೆ.  ಈ ಬಾರಿಯೂ ಮನರಂಜನೆಗೆ ಏನೂ ಕಡಿಮೆ ಇಲ್ಲದ ಹಾಗೇ ಅನುಬಂಧ ಮೂಡಿಬರಲಿದೆ ಎನ್ನಲಾಗಿದೆ.


<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿ ಜುಗಾರಿ ಕ್ರಾಸ್ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ

ಸಿನಿಮಾ ಸಕ್ಸಸ್ ಖುಷಿ ಮಧ್ಯೆ ದಿಢೀರ್ ಎಚ್ ಡಿ ದೇವೇಗೌಡರನ್ನು ಭೇಟಿಯಾದ ರಿಷಬ್

BBK12: ರಕ್ಷಿತಾಗೆ ಈಡಿಯಟ್ ಎಂದ ಅಶ್ವಿನಿ: ನಟ್ಟು ಬೋಲ್ಟ್ ಟೈಟ್ ಮಾಡಿ ಎಂದ ನೆಟ್ಟಿಗರು: video

ಕಾಮಿಡಿ ಕಿಲಾಡಿಗಳಿಂದಲೂ ಮಾಸ್ಟರ್ ಆನಂದ್ ಹೊರಬಂದ್ರಾ

ಸುಹಾನಾ ಸಯ್ಯದ್ ಮದುವೆ ಡೇಟ್ ಫಿಕ್ಸ್‌, ಸರಳ ವಿವಾಹವಾಗಲಿದ್ದಾರೆ ಗಾಯಕಿ

ಮುಂದಿನ ಸುದ್ದಿ
Show comments