ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್ ಸೀರಿಯಲ್ಗಳಲ್ಲಿ ಒಂದಾಗಿರುವ 'ಲಕ್ಷ್ಮೀ ಬಾರಮ್ಮ' ಹೊಸ ತಿರುವು ಪಡೆದುಕೊಂಡಿದೆ. ಕಿಡ್ಯ್ನಾಪ್ ಪ್ರಕರಣವನ್ನು ಭೇದಿಸಲು ಹೋದ ಕೀರ್ತಿ ಶವವಾಗಿ ಸಿಕ್ಕಿದ್ದಾಳೆ.
ಕೀರ್ತಿಯ ಹುಡುಕಾಟದಲ್ಲಿದ್ದ ಲಕ್ಷ್ಮೀಗೆ ಇದು ಶಾಕ್ ತಂದಿದ್ದು, ಕೀರ್ತಿ ಸತ್ತಿಲ್ಲ, ಇದು ನಾನು ನಂಬಲ್ಲ ಎಂದು ಗೋಗರೆದಿದ್ದಾಳೆ. ಸದ್ಯ ಬಿಟ್ಟಿರುವ ಪ್ರೋಮೋದಲ್ಲಿ ಕೀರ್ತಿ ಪ್ರೀತಿಸಿದ ಹುಡುಗ ವೈಷ್ಣವ್ ಅವಳ ಅಂತ್ಯಸಂಸ್ಕಾರ ನೆರವೇರಿಸಿದ್ದಾನೆ.
ಕಾವೇರಿಗೆ ತಕ್ಕ ಬುದ್ಧಿ ಕಲಿಸಲು ಹೋದ ಕೀರ್ತಿಯನ್ನೇ ಬೆಟ್ಟದ ಮೇಲಿಂದ ತಳ್ಳಿದ್ದಾಳೆ. ಆದರೆ ಇದೀಗ ಕೀರ್ತಿ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಪೊಲೀಸರು ಹೇಳಿದ್ದಾರೆ.
ಇನ್ನೊಂದೆಡೆ ಸುಟ್ಟ ಸ್ಥಿತಿಯಲ್ಲಿ ಹೇಗೆ ಪತ್ತೆಯಾದಳು ಎಂಬ ಅನುಮಾನ ಕಾವೇರಿಗೆ ಶುರುವಾಗಿದೆ. ಕೀರ್ತಿಗೆ ಈ ಪರಿಸ್ಥಿತಿಯನ್ನು ತಂದವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಲ್ಲ ಎಂದು ಲಕ್ಷ್ಮೀ ಪಣತೊಟ್ಟಿದ್ದಾಳೆ.
ಇಷ್ಟಾದರೂ ಕೀರ್ತಿ ಬದುಕುಳಿದಿರಬಹುದು ಎಂಬುದು ಪ್ರೇಕ್ಷಕರ ನಿರೀಕ್ಷೆ. ಸದ್ಯ ಸೀರಿಯಲ್ ತುಂಬಾನೇ ಕುತೂಹಲದಿಂದ ಮೂಡಿಬರುತ್ತಿದ್ದು, ಲಕ್ಷ್ಮೀ ಹೊಸ ರೂಪ ನೋಡಿ ಪ್ರೇಕ್ಷಕರು ಖುಷಿಯಾಗಿದ್ದಾರೆ.