ಕ್ಯೂರಿಯಾಸಿಟಿ ಮೂಡಿಸಿದ ‘ದಿ ಚೆಕ್ಮೇಟ್’ ಟೀಸರ್

ಮಂಗಳವಾರ, 25 ಫೆಬ್ರವರಿ 2020 (13:29 IST)
‘ದಿ ಚೆಕ್ ಮೇಟ್’ ಕನ್ನಡ ಸಿನಿಮಾದ ಕುತೂಹಲಕಾರಿ ಟೀಸರ್ ರಿಲೀಸ್ ಆಗಿದೆ..ಭರತೇಶವಸಿಷ್ಠ, ಸಂತೋಷ್ ಚಿಪ್ಪಾಡಿ ನಿರ್ದೇಶನದ ಈ ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡಿದೆ. 
ರಂಜನ್ ಹಾಸನ್ ನಾಯಕ ನಟನಾಗಿ ‘ದಿ ಚೆಕ್ ಮೇಟ್’ ಚಿತ್ರದಲ್ಲಿನಟಿಸಿದ್ದಾರೆ. ಈ ಹಿಂದೆ ಪಾರು ಐ ಲವ್ ಯೂ ಚಿತ್ರದಲ್ಲಿ ನಾಯಕ ನಟನಾಗಿ ಮಿಂಚಿದ್ದ ರಂಜನ್ ‘ದಿ ಚೆಕ್ ಮೇಟ್’ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.
 
ಶೂಟಿಂಗ್ ಮುಗಿಸಿ ಸೆನ್ಸಾರ್ ಅಂಗಳದಲ್ಲಿರುವ ‘ದಿ ಚೆಕ್ ಮೇಟ್’ ಚಿತ್ರ ಕುತೂಹಲಕಾರಿಟೀಸರ್ ಮೂಲಕ ತನ್ನ ಪ್ರಚಾರ ಕಾರ್ಯ ಶುರು ಮಾಡಿದೆ. ಟೀಸರ್ ಸಖತ್ ಪ್ರಾಮಿಸಿಂಗ್ಆ ಗಿ ಮೂಡಿಬಂದಿದ್ದು, ಸದ್ಯದಲ್ಲೇ ಚಿತ್ರದ ಟ್ರೈಲರ್ ಹಾಗೂ ಹಾಡುಗಳ ಮೂಲಕ ‘ದಿ ಚೆಕ್ಮೇಟ್’ ಚಿತ್ರ ಸೌಂಡ್ ಮಾಡಲಿದೆ.
 
ರಂಜನ್ ಹಾಸನ್ ನಾಯಕ ನಟನಾಗಿ ಅಭಿನಯಿಸುವುದರ ಜೊತೆ ಚಿತ್ರದ ನಿರ್ಮಾಪಕನಜಬಾವ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ. ಜಗದ್ ಜ್ಯೋತಿ ಮೂವಿ ಮೇಕರ್ಸ್ ಬ್ಯಾನರ್ನಡಿ ಚಿತ್ರ ನಿರ್ಮಾಣವಾಗಿದ್ದು, ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ. ಸತೀಶ್ ರಾಜೇಂದ್ರನ್ ಕ್ಯಾಮೆರಾ ವರ್ಕ್ ದಿ ಚೆಕ್ಮೇಟ್ ಚಿತ್ರಕ್ಕಿದೆ.
 
ಸಸ್ಪೆನ್ಸ್, ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡಿರೋ ‘ದಿ ಚೆಕ್ ಮೇಟ್’ ಚಿತ್ರದಲ್ಲಿ ಲವ್,ಕಾಮಿಡಿ ಎಲ್ಲವೂ ಇದೆ. ವಿಜಯ್ ಚೆಂಡೂರ್, ಸರ್ದಾರ್ ಸತ್ಯ, ನೀನಾಸಂ ಅಶ್ವಥ್, ಸುಧಿ, ಪ್ರದೀಪ್ ಪೂಜಾರಿ ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದು, ಚಿತ್ರದಲ್ಲಿ ಒಟ್ಟು ನಾಲ್ಕುಜನ ನಾಯಕಿಯರು ನಟಿಸಿದ್ದಾರೆ. ಟೀಸರ್ ರಿಲೀಸ್ ಮಾಡುವ ಮೂಲಕ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಸದ್ಯದಲ್ಲೇ ಚಿತ್ರದ ಬಗ್ಗೆ ಇನ್ನಷ್ಟು ಡಿಟೈಲ್ಸ್ನೀಡಲಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಲೇಖನಿ ಜೊತೆ 'ಲೆಗಸಿ' ಮಚ್ಚು ಹಿಡಿಯಲಿದ್ದಾರೆ ಲವ್ವರ್ ಬಾಯ್ ವಿಹಾನ್..!