ಲೇಖನಿ ಜೊತೆ 'ಲೆಗಸಿ' ಮಚ್ಚು ಹಿಡಿಯಲಿದ್ದಾರೆ ಲವ್ವರ್ ಬಾಯ್ ವಿಹಾನ್..!

ಮಂಗಳವಾರ, 25 ಫೆಬ್ರವರಿ 2020 (13:20 IST)
'ಕುರುಕ್ಷೇತ್ರ' ಸಿನಿಮಾದಲ್ಲಿ ಸಹನಿರ್ದೇಶಕರಾಗಿದ್ದ, ಎಂ. ಸುಭಾಷ್ ಚಂದ್ರ ಇದೀಗ ಸ್ವತಂತ್ರ ನಿರ್ದೇಶಕರಾಗಿ ಸಿನಿಮಾವೊಂದನ್ನು ತಯಾರಿಸಿದ್ದಾರೆ. ಸೋಷಿಯಲ್ ಅವೆರ್ ನೆಸ್ ಇಟ್ಟುಕೊಂಡು ಬರವಣಿಗೆಯನ್ನೇ ಮೂಲಮಂತ್ರವನ್ನಾಗಿಸಿಕೊಂಡು ತೆರೆ ಮೇಲೆ ತರೋದಕ್ಕೆ ಸಿದ್ಧವಾಗಿದ್ದಾರೆ. ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಢಿಪ್ರೆಂಟ್ ಫೀಲ್ ಕೊಡ್ತಿದೆ. ನಟ ವಿಹಾನ್ ಖಡಕ್ ಲುಕ್ ನಲ್ಲಿ ಮಿಂಚುತ್ತಿದ್ದಾರೆ.
ಚಿತ್ರದ ಶೀರ್ಷಿಕೆಯೇ ವಿಭಿನ್ನವಾಗಿದೆ. 'ಲೆಗಸಿ' ಎಂಬ ಸಿನಿಮಾ ಬರುತ್ತುದೆ ಎಂದಾಕ್ಷಣಾ ಹೆಸರಿನ ಅರ್ಥ ಹುಡುಕುವವರ ಸಂಖ್ಯೆ ಹೆಚ್ಚಾಗಿದೆ. ಯಾಕಂದ್ರೆ ಆ ಪದದ ಅರ್ಥ ಅಷ್ಟು ಸುಂದರ, ಅದ್ಭುತವಾಗುದೆ. 'ಲೆಗಸಿ' ಎಂದರೆ ಪರಂಪರೆ. ಹೀಗಾಗಿ ಸಾಹಸ ಪ್ರಧಾಬ ಸಿನಿಮಾದಲ್ಲಿ ಯಾವ ಪರಂಪರೆ ಹೇಳುತ್ತಿದ್ದಾರೆಂಬ ಹಲವು ಪ್ರಶ್ನೆಗಳು ಪ್ರೇಕ್ಷಕನ ತಲೆಯನ್ನು ಕೊರೆಯುವುದಕ್ಕೆ ಶುರು ಮಾಡಿವೆ.
ಸಿನಿಮಾದಲ್ಲಿ ಫೈಟ್, ಲವ್ ಸೇರಿದಂತೆ ಎಲ್ಲಾ ಅಂಶಗಳು ಅಡಕವಾಗಿವೆ. ಬರಹಗಾರರ ಪಾರಂಪರೆಯನ್ನು ಸಿ‌ನಿಮಾದಲ್ಲಿ ಹೈಲೈಟ್ ಮಾಡಲಾಗಿದೆ. ವಿಹಾನ್ ಸಿನಿಮಾದಲ್ಲಿ ಲೇಖಕನಾಗಿ ಮಿಂಚಲು ರೆಡಿಯಾಗಿದ್ದಾರೆ. ಲವ್ವರ್ ಬಾಯ್ ಆಗಿದ್ದ ವಿಹಾನ್ ಈ ಸಿನಿಮಾದಲ್ಲಿ ಲೇಖನಿ ಜೊತೆ ಮಚ್ಚನ್ನು ಜಳಪಿಸಲು ಬರುತ್ತಿದ್ದಾರೆ. ವಿಹಾನ್ ಲುಕ್ ಕೂಡ ಖಡಕ್ ಆಗಿ ಕಾಣುತ್ತಿದ್ದಾರೆ.
ಸಿನಿಮಾದ ಇನ್ ಡೋರ್ ಶೂಟಿಂಗ್ ಬೆಂಗಳೂರಿನ ಸುತ್ತ ಮುತ್ತ ಕಂಪ್ಲೀಟ್ ಆಗಿದ್ದು, ದೊಡ್ಡಬಳ್ಳಾಪುರ, ಮಡಿಕೇರಿ, ರಾಮನಗರದ ಸೇರಿದಂತೆ ಚಿತ್ರೀಕರಣ ಬಾಕಿ ಇದೆ. ವಿಹಾನ್ ಗೆ ದೀಪ್ತಿ ಸತಿ ನಾಯಕಿಯಾಗಿದ್ದಾರೆ. ಗ್ರೇಟ್‌ಬ್ರೋಸ್ ಪಿಕ್ಚರ್ಸ್‌’ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಸುರೇಶ್‌ ರಾಜ್‌ ಸಂಗೀತ ಮತ್ತು ಸುಂದರ್ ಪಂಡಿಯಾನ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಟ್ರೈಲರ್ ಮೂಲಕ ಗಮನ ಸೆಳೆಯುತ್ತಿದೆ ಜಗ್ಗಿ ಜಗನ್ನಾಥ್ ಚಿತ್ರ