Webdunia - Bharat's app for daily news and videos

Install App

ಜಬರ್ದಸ್ತ್ ಟೀಸರ್ ರಿಲೀಸ್ ಮಾಡಿದ ‘ಬಂಪರ್’ ಚಿತ್ರತಂಡ

Webdunia
ಮಂಗಳವಾರ, 8 ಸೆಪ್ಟಂಬರ್ 2020 (10:53 IST)
ಬೆಂಗಳೂರು: ಹರಿ ಸಂತೋಷ್ ನಿರ್ದೇಶನದ ‘ಬಂಪರ್’ ಚಿತ್ರದ ಜಬರ್ದಸ್ತ್ ಟೀಸರ್ ಇಂದು ಬಿಡುಗಡೆಯಾಗಿದೆ. ನಾಯಕ ನಟ ಧನ್ವೀರ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಟೀಸರ್ ರಿಲೀಸ್ ಮಾಡಿದ್ದು, ಪವರ್ ಫುಲ್ ಟೀಸರ್ ಸಖತ್ ಮೆಚ್ಚುಗೆ ಪಡೆದುಕೊಂಡಿದೆ.

ಧನ್ವೀರ್ ಹೊಸ ಅವತಾರ ನೋಡಿ ಸಿನಿರಸಿಕರು ಸಖತ್ ಥ್ರಿಲ್ ಆಗಿದ್ದಾರೆ. ಟೈಟಲ್ ಮೂಲಕ ಗಮನ ಸೆಳೆದಿದ್ದ ‘ಬಂಪರ್’ ಚಿತ್ರ ಟೀಸರ್ ಮೂಲಕ ಇನ್ನಷ್ಟು ಟಾಕ್ ಕ್ರಿಯೇಟ್ ಮಾಡಿದ್ದು,ಬಿಡುಗಡೆಯಾದ ಕೆಲ ಗಂಟೆಗಳಲ್ಲಿ ಐದು ಲಕ್ಕಕ್ಕೂ ಹೆಚ್ಚು ವೀವ್
ಪಡೆದುಕೊಂಡಿದೆ.

ಬಜಾರ್ ಸಿನಿಮಾ ಮೂಲಕ ಟಾಕ್ ಕ್ರಿಯೇಟ್ ಮಾಡಿದ್ದ ಧನ್ವೀರ್ ಸೆಕೆಂಟ್ ಇನ್ನಿಂಗ್ಸ್ಗಾಗಿ ಸಾಕಷ್ಟು ತಾಲೀಮು ನಡೆಸಿ ಅಳೆದು ತೂಗಿ ಚಿತ್ರ ಆಯ್ಕೆ ಮಾಡಿಕೊಂಡಿದ್ರು. ಇದೀಗ ಚಿತ್ರದ ಪುಟ್ಟ ತುಣುಕಿಗೆ ಸಿಕ್ತಿರೋ ಪ್ರತಿಕ್ರಿಯೆ ಧನ್ವೀರ್ ಆತ್ಮವಿಶ್ವಾಸ ಹೆಚ್ಚಿಸಿದೆ.
ಟೀಸರ್ಗೆ ಸಿಕ್ಕ ಅಭೂತಪೂರ್ವ ರೆಸ್ಪಾನ್ಸ್ ನಿಂದ ಇಡೀ ‘ಬಂಪರ್’ ಚಿತ್ರತಂಡ ದಿಲ್ ಖುಷ್ ಆಗಿದ್ದು, ಧನ್ವೀರ್ ಹುಟ್ಟುಹಬ್ಬದ ಸಂಭ್ರಮವನ್ನ ದುಪ್ಪಟ್ಟು ಮಾಡಿದೆ. ಕೆವಿಎನ್ ಪ್ರೊಡಕ್ಷನ್ ಬ್ಯಾನರ್ ಅಡಿ ಮೂಡಿ ಬರ್ತಿರೋ ‘ಬಂಪರ್’ ಚಿತ್ರಕ್ಕೆ ಸುಪ್ರಿತ್ ಬಂಡವಾಳ ಹೂಡಿದ್ದಾರೆ.

ಈಗಾಗಲೇ ಪ್ರಿಪ್ರೊಡಕ್ಷನ್ ಕೆಲಸ ಮುಗಿಸಿರೋ ಬಂಪರ್ ಚಿತ್ರತಂಡ ಸದ್ಯದಲ್ಲೇ ಮತ್ತೆ ಚಿತ್ರೀಕರಣಕ್ಕೆ ಸಜ್ಜಾಗಲಿದೆ. ಅಜನೀಶ್ ಲೋಕ್ ನಾಥ್ ಸಂಗೀತ ನಿರ್ದೇಶನ, ವಿಕ್ರಂ ಮೋರ್ ಸಾಹಸ, ನವೀನ್ ಕುಮಾರ್ ಸಿನಿಮಾಟೋಗ್ರಫಿ ಬಂಪರ್ ಚಿತ್ರಕ್ಕಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹೆಣ್ಣು ಮಗುವಾಗುತ್ತಿದ್ದ ಹಾಗೇ ಆಥಿಯಾಗೆ ಬಿಗ್ ಸರ್ಪ್ರೈಸ್ ಕೊಟ್ಟ ಕೆಎಲ್ ರಾಹುಲ್‌, ಸುನೀಲ್ ಶೆಟ್ಟಿ

Machete Reels Case: ರಜತ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ತನ್ನ ಬ್ಯೂಟಿಯನ್ನು ಕೆದಕಿದವನಿಗೆ ಚಳಿ ಬಿಡಿಸಿದ ನಟಿ ಖುಷ್ಭೂ

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments