ಬೆಂಗಳೂರು: ಎರಡನೇ ಮಗುವಿನ ಆಗಮನದ ಖುಷಿಯಲ್ಲಿರುನ ನಟಿ ಸಂಜನಾ ಗಲ್ರಾನಿ ಅವರು ಇದೀಗ ಬೇಬಿ ಬಂಪ್ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಅದಲ್ಲದೆ ತಾಯ್ತನದ ಬಗ್ಗೆ ಬರೆದುಕೊಂಡಿದ್ದಾರೆ. 35ನೇ ವಯಸ್ಸಿನಲ್ಲಿ ಎರಡನೇ ಮಗುವಿನ ಆಗಮನ ನನಗೆ ಅಷ್ಟು ಸುಲಭವಾಗಿರಲಿಲ್ಲ. ಈ ಸಂದರ್ಭದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು ಎಂದು ಬರೆದುಕೊಂಡಿದ್ದಾರೆ.
ತಾಯ್ತನ ಒಂದು ಸುಂದರವಾದ ಪ್ರಯಾಣ, ಆದರೂ ಅದು ಹಲವಾರು ಸವಾಲುಗಳೊಂದಿಗೆ ಬೆರೆತುಹೋಗಿದೆ. ನನ್ನ ಎರಡನೇ ಮಗು ನನಗೆ ಅಷ್ಟು ಸುಲಭವಾಗಿ ಬಂದಿಲ್ಲ. ನಾನು 35 ನೇ ವಯಸ್ಸಿನಲ್ಲಿ ಎದುರಿಸಬೇಕಾದ ತಾಯಿಯ ಸವಾಲುಗಳು ಬಹಳಷ್ಟಿದ್ದವು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನ್ನ ಪುಟ್ಟ ಮಗು ನನ್ನ ತೋಳುಗಳಲ್ಲಿ ಸಿಕ್ಕಾಗ ನನಗೆ ಅನಿಸುತ್ತದೆ. ಇದೆಲ್ಲವೂ ತುಂಬಾ ಯೋಗ್ಯವಾಗಿರುತ್ತದೆ. ದಯವಿಟ್ಟು ನಿಮ್ಮ ಪ್ರಾರ್ಥನೆಯಲ್ಲಿ ನನ್ನನ್ನು ಇರಿಸಿ ಮತ್ತು ನಿಮ್ಮ ಅತ್ಯುತ್ತಮ ಶಕ್ತಿಯನ್ನು ನಮಗೆ ನೀಡಿ ಆಶೀರ್ವದಿಸಿ ಎಂದು ಬರೆದುಕೊಂಡಿದ್ದಾರೆ.
2021ರಲ್ಲಿ ವೈದ್ಯ ಅಜೀಜ್ ಪಾಷಾ ಅವರನ್ನು ಕೈಹಿಡಿದ ಸಂಜನಾ ಗಲ್ರಾನಿಗೆ ಒಂದು ಗಂಡು ಮಗುವಿದೆ.