ಬೆಂಗಳೂರು: ಮದುವೆಯಾಗದೆ ಐವಿಎಫ್ ಮೂಲಕ ಗರ್ಭದರಿಸಿ ಸುದ್ದಿಯಾಗಿದ್ದ ಕನ್ನಡದ ಖ್ಯಾತ ನಟಿ ಭಾವನ ರಾಮಣ್ಣಗೆ ಇದೀಗ ಹೆರಿಗೆಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದ ಭಾವನ ಇದೀಗ ಒಂದು ಮಗುವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಎರಡು ವಾರಗಳ ಹಿಂದೆಯೇ ಭಾವನ ಅವರಿಗೆ ಹೆರಿಗೆಯಾಗಿದ್ದು, ಒಂದು ಮಗು ತೀರಿಕೊಂಡಿದ್ದು, ಇನ್ನೊಂದು ಮಗು ಕ್ಷೇಮವಾಗಿದೆ ಎಂದು ಕ್ಷೇಮವಾಗಿದೆ. ತಾಯಿ ಹಾಗೂ ಹೆಣ್ಣು ಮಗು ಆರೋಗ್ಯವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಐವಿಎಫ್ ಮೂಲಕ ತಾಯಿ ಆದ ನಟಿ ಭಾವನ ಅವರು ಇಚೆಗೆ ತನ್ನ ಆಪ್ತ ವಲಯದ ಜತೆಗೆ ಅದ್ಧೂರಿಯಾಗಿ ಸೀಮಂತ ಮಾಡಿಸಿಕೊಂಡಿದ್ದರು. ೀ ಸಂದರ್ಭದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.
ಇದೀಗ ಸಿಕ್ಕಿರುವ ಮಾಹಿತಿಯಂತೆ ವೈದ್ಯರ ಸೂಚನೆಯಂತೆ ಹೆರಿಗೆ ಮಾಡಲಾಗಿದ್ದು, ಒಂದು ಮಗುವಿನಲ್ಲಿ ಏಳು ತಿಂಗಳ ನಂತರ ಸಮಸ್ಯೆ ಕಾಣಿಸಿಕೊಂಡ ಕಾರಣ 8 ತಿಂಗಳಿಗೆ ಹೆರಿಗೆ ಮಾಡಿಸಲಾಗಿದೆ. ಸದ್ಯ ತಾಯಿ ಮಗು ಇಬ್ಬರು ಕ್ಷೇಮವಾಗಿದ್ದರೆ ಎನ್ನಲಾಗಿದೆ.