ಬೆಂಗಳೂರು: ದುಬೈನಲ್ಲಿ ನಡೆದ ಸೈಮಾ ಅವಾರ್ಡ್‌ನಲ್ಲಿ ಕನ್ನಡ ಭಾಷೆ ಮೇಲಿನ ತಾರತಮ್ಯದ ಬಗ್ಗೆ ಆಯೋಜಕರಿಗೆ ನಟ ದುನಿಯಾ ವಿಜಯ್ ಅವರು ವೇದಿಕೆಯಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ದುಬೈನಲ್ಲಿ ನಡೆದ ಅವಾರ್ಡ್ ಕಾರ್ಯಕ್ರಮದಲ್ಲಿ ಎಲ್ಲ ಭಾಷೆಯ ವಿಜೇತರಿಗೆ ಪ್ರಶಸ್ತಿ ಕೊಟ್ಟ ಬಳಿಕ ಕನ್ನಡದವರಿಗೆ ಕೊನೆಯಲ್ಲಿ ಕೊಡಲಾಗುತ್ತದೆ. ಎಲ್ಲರೂ ಹೋದಮೇಲೆ ಕನ್ನಡದವರಿಗೆ ಪ್ರಶಸ್ತಿಗೆ ನೀಡುತ್ತಾರೆ. ಇದು ತುಂಬಾನೇ ಬೇಜಾರಾಗುತ್ತದೆ. ಇನ್ನೂ ಯಾವತ್ತೂ ಈ ರೀತಿ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.
ನಾನು ಈ ಹಿಂದೆಯೂ ಇದನ್ನೆಲ್ಲ ಅನುಭವಿಸಿದ್ದೇವೆ. ಆದರೆ ಹೊಸಬರಿಗೆ ಇದು ಹೊಸದು, ಇದರಿಂದ ಅವರಿಗೆ ತುಂಬಾನೇ ನೀವಾಗುತ್ತದೆ. ಕನಸ್ಸು ಕಟ್ಟಿಕೊಂಡ ಬಂದ ಅವರಿಗೆ ಈ ರೀತಿಯ ತಾರತಮ್ಯ ಅವರ ಕನಸ್ಸು ನುಚ್ಚು ನೂರು ಮಾಡುತ್ತದೆ.
ಕನ್ನಡ ಅಷ್ಟೊಂದು ಕೆಲಮಟ್ಟಕ್ಕೆ ಇಳಿದಿಲ್ಲ, ಕನ್ನಡ ದೊಡ್ಡ ಸ್ಥಾನದಲ್ಲಿ, ಕನ್ನಡಗೂ ಗೌರವನ್ನು ಕೊಡಿ ಎಂದು ದುನಿಯಾ ವಿಜಯ್ ವೇದಿಕೆಯಲ್ಲೇ ಆಯೋಜಕರ ವಿರುದ್ಧ ಗರಂ ಆಗಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಟ ದುನಿಯಾ ವಿಜಯ್ ಅವರ ಮಾತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.