Select Your Language

Notifications

webdunia
webdunia
webdunia
webdunia

ನಟ ದುನಿಯಾ ವಿಜಯ್ ಶ್ಯೂರಿಟಿಯಲ್ಲಿ ಹೊರಗೆ ಬಂದಿದ್ದ ಅಪರಾಧಿಯಿಂದ ಡಬಲ್ ಮರ್ಡರ್‌

Bengaluru Double Murder, Duniya Vijay Shurity, Rape Case

Sampriya

ಬೆಂಗಳೂರು , ಸೋಮವಾರ, 11 ನವೆಂಬರ್ 2024 (15:42 IST)
ಬೆಂಗಳೂರು: ನಗರದ ಹೊರವಲಯದಲ್ಲಿ ನಡೆದಿದ್ದ ಜೋಡಿ ಹತ್ಯೆ ಪ್ರಕರಣ ಸಂಬಂಧ ಬಂಧಿಯಾಗಿರುವ ಆರೋಪಿಯನ್ನು ಈ ಹಿಂದೆ ನಟ ದುನಿಯಾ ವಿಜಯ್ ಅವರು ಜೈಲಿಂದ್ದ ಬಿಡುಗಡೆ ಮಾಡಿದ್ದರು ಎಂಬ ಮಾಹಿತಿ ಸಿಕ್ಕಿದೆ.

ಡಬಲ್ ಮರ್ಡರ್ ಪ್ರಕರಣದ ಆರೋಪಿ ಸುರೇಶ್‌ ಈ ಹಿಂದೆ ರೇಪ್ ಕೇಸ್‌ನಲ್ಲಿ ಜೈಲು ಸೇರಿದ್ದ. 10ವರ್ಷ ಶಿಕ್ಷೆ ಅನುಭವಿಸಿದ್ದ ಅಪರಾಧಿಗೆ ಶ್ಯೂರಿಟಿ ಹಣ ನೀಡಲು ಯಾರೂ ಇರಲಿಲ್ಲ. ಈ ಸಂದಂರ್ಭದಲ್ಲಿ ನಟ ದುನಿಯಾ ವಿಜಯ್ ಅವರು ಒಂದಷ್ಟು ಅ‍ಪರಾಧಿಗಳಿಗೆ ತಲಾ ಮೂರು ಲಕ್ಷದಂತೆ ಶ್ಯೂರಿಟಿ ಹಣವನ್ನು ಕಟ್ಟಿದ್ದರು. ಇದೀಗ ಸುರೇಶ್ ಡಬಲ್ ಮರ್ಡರ್‌ ಕೃತ್ಯ ಎಸಗುವ ಮೂಲಕ ದುನಿಯಾ ವಿಜಿ ಅವರ ಆಶಯವನ್ನು ಕೊಲೆ ಪಾತಕಿ ವ್ಯರ್ಥ ಮಾಡಿದ್ದಾನೆ ಎನ್ನಲಾಗಿದೆ.

ಜೈಲಿಂದ ಬಿಡುಗಡೆ ಬಳಿಕ ಮಾರ್ಕೆಟ್‌ನಲ್ಲಿ ಕೊತ್ತಮಿರಿ ಸೊಪ್ಪು ಮಾರಾಟ ಮಾಡಿ ಸುರೇಶ್‌ ಜೀವನ ಸಾಗಿಸುತ್ತಿದ್ದ. ಸುರೇಶ್ ಸಂಬಂಧಿಯಿಂದ ಶೆಡ್‌ನಲ್ಲಿ ಕೆಲಸ ಪಡೆದುಕೊಂಡಿದ್ದ. ಗುಜರಿ ಮಾರುವ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದ. ಕೊಲೆಯಾದ ನಾಗೇಶ್ ಮತ್ತು ಮಂಜುನಾಥ್, 'ನೀನು ಕಳ್ಳ, ಕೊಲೆಗಾರ' ಅಂತಾ ಹೀಯಾಳಿಸಿದ್ದರು. ಹೀಗಾಗಿ, ಈಚೆಗೆ ಇಬ್ಬರನ್ನೂ ಆರೋಪಿ ಸುರೇಶ್‌ ಕೊಲೆ ಮಾಡಿದ್ದ. ಈಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮಂಗೆ ನಾನು ಅಣ್ಣನಿಗೆ ಕೈ ಕೊಡಲ್ಲ ಕುಮಾರಸ್ವಾಮಿ: ಸಾವಲ್ಲೂ ಅಣ್ಣನ ಜೊತೆ ಎಂದ ಡಿಕೆ ಸುರೇಶ್