Webdunia - Bharat's app for daily news and videos

Install App

ಕ್ಯಾಪ್ಟನ್ ವಿಜಯ್ ಕಾಂತ್ ಪಾರ್ಥಿವ ಶರೀರದ ಮುಂದೆ ಗಳ ಗಳನೆ ಅತ್ತ ದಳಪತಿ ವಿಜಯ್

Webdunia
ಶುಕ್ರವಾರ, 29 ಡಿಸೆಂಬರ್ 2023 (08:56 IST)
Photo Courtesy: Twitter
ಚೆನ್ನೈ: ನಿನ್ನೆ ನಿಧನರಾದ ತಮಿಳು ಸ್ಟಾರ್ ನಟ, ಡಿಎಂಡಿಕೆ ಪಕ್ಷದ ನಾಯಕ ಕ್ಯಾಪ್ಟನ್ ವಿಜಯ್ ಕಾಂತ್ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ.

ನಿನ್ನೆಯಿಂದ ಹಲವಾರು ಗಣ್ಯರು ವಿಜಯ್ ಕಾಂತ್ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇವರಲ್ಲಿ ದಳಪತಿ ವಿಜಯ್ ಕಡಾ ಒಬ್ಬರು. ವಿಜಯ್ ವೃತ್ತಿ ಜೀವನ ಬೆಳವಣಿಗೆಗೆ ವಿಜಯ್ ಕಾಂತ್ ಕೊಡುಗೆ ಅಪಾರ. ಹೀಗಾಗಿ ತಮ್ಮ ಮೆಚ್ಚಿನ ನಟನ ಅಂತಿಮ ದರ್ಶನ ಪಡೆಯಲು ವಿಜಯ್ ಕಣ್ಣೀರು ಹಾಕುತ್ತಲೇ ಬಂದಿದ್ದರು.

ಪಾರ್ಥಿವ ಶರೀರದ ದರ್ಶನ ಮಾಡುತ್ತಲೇ ಭಾವುಕರಾದ ವಿಜಯ್ ಗಳ ಗಳನೆ ಅತ್ತಿದ್ದಾರೆ. ಕೆಲ ಹೊತ್ತು ವಿಜಯ್ ಕಾಂತ್ ಪಾರ್ಥಿವ ಶರೀರದ ಮುಂದೆಯೇ ನಿಂತಿದ್ದ ವಿಜಯ್ ಬಳಿಕ ಕುಟುಂಬಸ್ಥರನ್ನು ಮಾತನಾಡಿಸಿ ಅಲ್ಲಿಂದ ತೆರಳಿದ್ದಾರೆ.

ಅಭಿಮಾನಿಗಳಿಂದ ಪ್ರೀತಿಯಿಂದ ಕ್ಯಾಪ್ಟನ್ ಎಂದೇ ಕರೆಯಿಸಿಕೊಳ್ಳುವ ವಿಜಯ್ ಕಾಂತ್ ಕೊರೋನಾ ಮತ್ತು ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಾರೆ. ಸುಮಾರು 154 ಸಿನಿಮಾಗಳಲ್ಲಿ ಅಭಿನಯಿಸಿದ್ದಲ್ಲದೆ, ರಾಜಕೀಯದಲ್ಲೂ ವಿಪಕ್ಷ ನಾಯಕನಾಗಿ ಮಿಂಚಿದ ಹೆಗ್ಗಳಿಕೆ ಅವರದ್ದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments