Publish Date: Tue, 12 Apr 2022 (10:58 IST)
Updated Date: Tue, 12 Apr 2022 (11:01 IST)
ಚೆನ್ನೈ: ಬೀಸ್ಟ್ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ದಳಪತಿ ವಿಜಯ್ ಹೊಸ ಸುದ್ದಿ ಕೊಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ರಾಜಕೀಯ ಸೇರ್ಪಡೆ ಬಗ್ಗೆ ಸುಳಿವು ನೀಡಿದ್ದಾರೆ.
ಬೀಸ್ಟ್ ನಿರ್ದೇಶಕ ನೆಲ್ಸನ್ ನಡೆಸಿದ ಸಂದರ್ಶನದಲ್ಲಿ ವಿಜಯ್ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಮನಬಿಚ್ಚಿ ಮಾತನಾಡಿದ್ದಾರೆ.
ರಾಜಕೀಯಕ್ಕೆ ಸೇರುತ್ತೀರಾ ಎಂಬ ಪ್ರಶ್ನೆಗೆ ಅಭಿಮಾನಿಗಳು ಬಯಸಿದರೆ ರಾಜಕೀಯಕ್ಕೆ ಪ್ರವೇಶಿಸುವುದಾಗಿ ಹೇಳಿದ್ದಾರೆ. ಅಭಿಮಾನಿಗಳು ರಾಜಕೀಯಕ್ಕೆ ಬರುವಂತೆ ಹಲವು ಸಮಯದಿಂದ ಒತ್ತಾಯಿಸುತ್ತಲೇ ಇದ್ದಾರೆ. ಹೀಗಾಗಿ ಮುಂದೊಂದು ದಿನ ವಿಜಯ್ ರಾಜಕೀಯ ಪ್ರವೇಶ ಖಚಿತವೆನ್ನಲಾಗಿದೆ.