Publish Date: Tue, 02 Feb 2021 (09:05 IST)
Updated Date: Tue, 02 Feb 2021 (09:07 IST)
ಬೆಂಗಳೂರು: ಅದೊಂದು ಕಾಲವಿತ್ತು. ಬೇರೆ ಭಾಷೆಯ ಸಿನಿಮಾಗಳು ಕನ್ನಡಕ್ಕೆ ಬಂದು ಕನ್ನಡ ಸಿನಿಮಾಗಳನ್ನು ನೋಡೋರೇ ಇಲ್ಲ ಎಂದು ಇಲ್ಲಿನ ನಿರ್ಮಾಪಕರು ಗೋಳು ಹೇಳಿಕೊಳ್ಳುತ್ತಿದ್ದರು. ಆದರೆ ಈಗ ಅದೇ ಭಯ ಬೇರೆ ಭಾಷೆಯವರಿಗೆ ಕನ್ನಡ ಸಿನಿಮಾಗಳಿಂದ ಆಗುತ್ತಿದೆ.
ಮೇಲಿದ್ದವರು ಕೆಳಗಿಯಲೇ ಬೇಕು ಅಂತಾರಲ್ಲ. ಹಾಗೇ ಅಂದು ನಮ್ಮದೇ ರಾಜ್ಯದಲ್ಲಿ ನೆಲೆ ಕಂಡುಕೊಳ್ಳಲು ಹೆಣಗಾಡುತ್ತಿದ್ದ ಕನ್ನಡ ಸಿನಿಮಾಗಳು ಇಂದು ಪರಭಾಷೆಯ ಮಾರುಕಟ್ಟೆಯನ್ನು ಆಳಲು ಹೊರಟಿದೆ. ಅಂದು ಕನ್ನಡ ನಿರ್ಮಾಪಕರು ಗೋಳಾಡುತ್ತಿದ್ದ ಹಾಗೆ ಇಂದು ಕನ್ನಡ ಸಿನಿಮಾಗಳಿಂದಾಗಿ ನಮಗೆ ತೊಂದರೆಯಾಗುತ್ತಿದೆ ಎಂದು ಬೇರೆಯವರು ಗೋಳಾಡುವ ಹಾಗಾಗಿದೆ.