Publish Date: Sun, 31 Jan 2021 (10:10 IST)
Updated Date: Sun, 31 Jan 2021 (10:11 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ಟೈಟಲ್ ಲೋಗೋ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೇ ಸುದೀಪ್ ಸಿನಿಮಾಗೆ ಯಶ್ ಅಭಿಮಾನಿಗಳು ಸಾಥ್ ಕೊಟ್ಟಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾಗೆ ಸಂಬಂಧಪಟ್ಟ ಯಾವುದೇ ಫೋಟೋ, ವಿಡಿಯೋಗಳನ್ನು ಲೀಕ್ ಮಾಡಬೇಡಿ ಎಂದು ಯಶ್ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಆಗ್ರಹಿಸಿದ್ದಾರೆ. ಈ ಮೂಲಕ ಒಬ್ಬರ ಸಿನಿಮಾಗೆ ಇನ್ನೊಬ್ಬರು ಸಾಥ್ ಕೊಟ್ಟು ಒಗ್ಗಟ್ಟು ಪ್ರದರ್ಶಿಸಿದ್ದಾರೆ.