Publish Date: Fri, 11 Dec 2020 (09:25 IST)
Updated Date: Fri, 11 Dec 2020 (09:27 IST)
ಬೆಂಗಳೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರನ್ನು ಸಂದರ್ಶನವೊಂದರಲ್ಲಿ ಅವಹೇಳನ ಮಾಡಿ ಮಾತನಾಡಿದ ತೆಲುಗು ನಟ ವಿಜಯ ರಂಗರಾಜನ್ ವಿರುದ್ಧ ನವರಸನಾಯಕ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈತ ನತದೃಷ್ಟ ಶಿಖಾಮಣಿ. ಕಾಲವಾದ ಶ್ರೇಷ್ಠ ಸಾಧಕರ ಬಗ್ಗೆ ಕುಚೇಷ್ಠೆ ಮಾಡುವವ ಎಲ್ಲಿಯೂ ಸಲ್ಲದವ. ಅದರಲ್ಲೂ ಈತ ಕಲಾವಿದನಂತೆ. ಈ ದರಿದ್ರ ಮುಖವನ್ನು ಯಾವ ಸಿನಿಮಾದಲ್ಲೂ ನೋಡಿದ ನೆನಪಿಲ್ಲ. ಕನ್ನಡಿಗರೆ ಇವನ ಅನಿಷ್ಠ ಸೊಲ್ಲು ಅಡಗುವಂತೆ ಉತ್ತರಿಸಿ. ಇಂಥಾ ಹೀನ ಕೃತ್ಯ ನಡೆಯದಿರಲಿ. ಕನ್ನಡಿಗರ ಬಗ್ಗೆ ಭಯವಿರಲಿ ಎಂದು ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.