ಬೆಂಗಳೂರು: ಸೈಮಾ ಅವಾರ್ಡ್ ಸಮಾರಂಭದಲ್ಲಿ ಉದಯೋನ್ಮುಖ ನಟ ಪ್ರಶಸ್ತಿ ಗೆದ್ದ ಅಭಿಷೇಕ್ ಅಂಬರೀಶ್ ಬಗ್ಗೆ ತಾಯಿ, ನಟಿ ಸುಮಲತಾ ಭಾವುಕರಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಬರೆದುಕೊಂಡಿದ್ದಾರೆ.
ಅಭಿಷೇಕ್ ಅಮರ್ ಸಿನಿಮಾದಲ್ಲಿನ ನಟನೆಗಾಗಿ ಪ್ರಶಸ್ತಿ ಪಡೆದಿದ್ದಾರೆ. ಬಳಿಕ ಅಮ್ಮನ ಜೊತೆಗೆ ಪ್ರಶಸ್ತಿ ಸಮೇತ ಫೋಟೋ ತೆಗೆಸಿಕೊಂಡಿದ್ದಾರೆ.
ಈ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸುಮಲತಾ ಸಂತೋಷ ಮತ್ತು ಹೆಮ್ಮೆಯ ಕ್ಷಣಗಳು. ಅಭಿಯ ಮೊದಲ ಪ್ರಶಸ್ತಿ. ಅಂಬರೀಶ್ ಇದ್ದಿದ್ದರೆ ಅವರಿಗೆ ಮಗನ ಮೇಲೆ ಹೆಮ್ಮೆಯಾಗುತ್ತಿತ್ತು ಎಂದು ಸುಮಲತಾ ಹೇಳಿಕೊಂಡಿದ್ದಾರೆ.