Select Your Language

Notifications

webdunia
webdunia
webdunia
webdunia

ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಮೊದಲ ಕನ್ನಡದ ನಟ ಕಿಚ್ಚ ಸುದೀಪ್!

ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಮೊದಲ ಕನ್ನಡದ ನಟ ಕಿಚ್ಚ ಸುದೀಪ್!
ಬೆಂಗಳೂರು , ಸೋಮವಾರ, 9 ಏಪ್ರಿಲ್ 2018 (06:54 IST)
ಬೆಂಗಳೂರು : ತಮ್ಮ ಅಮೋಘವಾದ ಅಭಿನಯದ ಮೂಲಕ ಅಭಿನಯ ಚಕ್ರವರ್ತಿ ಎಂದು ಕರೆಸಿಕೊಂಡಿರುವ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಕನ್ನಡದಲ್ಲಿ ಮಾತ್ರವಲ್ಲದೇ ತಮಿಳು, ತೆಲುಗಲ್ಲೂ ಕೂಡ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.


 ಇವರು ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು ತಮ್ಮ ಅಭಿಮಾನಿಗಳ ಜೊತೆಗೆ ತಮ್ಮ ಸಿನಿಮಾಗಳ ಕುರಿತಾದ ಮಾಹಿತಿಯನ್ನು ಕೂಡ ಹಂಚಿಕೊಳ್ಳುತ್ತಿದ್ದರು. ಆದರೆ ಸುದೀಪ್ ಅವರು ಟ್ವಿಟ್ಟರ್ ನಷ್ಟು ಇನ್ಟಾಗ್ರಾಮ್ ನಲ್ಲಿ ಹೆಚ್ಚು ಸಕ್ರೀಯರಾಗಿಲ್ಲವಾದರೂ ಕೂಡ ಇನ್ಟಾಗ್ರಾಮ್ ಖಾತೆ ತೆರೆದ ಕೆಲವೇ ಕೆಲವು ತಿಂಗಳುಗಳು ಕಳೆದರೂ ಕೂಡ ಇದೀಗ ಅವರು ಇನ್ಟಾಗ್ರಾಮ್ ನಲ್ಲಿ 2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಹಾಗೇ ಟ್ವಿಟ್ಟರ್ ನಲ್ಲಿ ಕೂಡ ಇವರನ್ನು 1.97 ಮಿಲಿಯನ್ ಜನರು ಹಿಂಬಾಲಿಸುತ್ತಿದ್ದಾರೆ. ಹಾಗಾಗಿ ಇದೀಗ ಅವರು ಟ್ವಿಟ್ಟರ್ ಹಾಗೂ  ಇನ್ಟಾಗ್ರಾಮ್ ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಮೊದಲ ಕನ್ನಡದ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಾನ್ ಅಬ್ರಾಹಂರವರು ಪ್ರೇರಣಾ ಅರೋರಾ ವಿರುದ್ಧ ದೂರು ದಾಖಲಿಸಲು ಕಾರಣವೇನು..?