ಮುದ್ದಿನರಗಿಣಿ ಸುಧಾರಾಣಿಯವರ ಮಗಳು ಬೆಳ್ಳಿತೆರೆಗೆ

Webdunia
ಗುರುವಾರ, 7 ಡಿಸೆಂಬರ್ 2017 (07:21 IST)
ಬೆಂಗಳೂರು: ತಮ್ಮ ಚಿಕ್ಕ ವಯಸ್ಸಿನಲ್ಲೇ  ಬೆಳ್ಳಿತೆರೆಗೆ ಕಾಲಿಟ್ಟು ಕನ್ನಡ ಚಿತ್ರರಸಿಕರ ಮನಗೆದ್ದ ನಟಿ ಸುಧಾರಾಣಿ. ಈಗ ಇವರ ಮಗಳು ಬೆಳ್ಳಿತೆರೆಯಲ್ಲಿ ನಟಿಸಲು ಸಜ್ಜಾಗಿದ್ದಾರೆ.


ಕನ್ನಡ ಚಿತ್ರರಂಗದ ಖಳನಾಯಕನ ಪಾತ್ರದಲ್ಲಿ ಪ್ರಖ್ಯಾತಿಯಾದ ಕೀರ್ತಿರಾಜ್ ಅವರ ಪುತ್ರ ಧರ್ಮ ಕೀರ್ತಿರಾಜ್ ನಟನೆಯ ಹೊಸ ಚಿತ್ರ ‘ಇದು ಚಕ್ರವ್ಯೂಹ’ಕ್ಕೆ ಸುಧಾರಾಣಿಯವರ ಮಗಳು ನಿಧಿ ಗೋವರ್ಧನ್ ಆಯ್ಕೆಯಾಗಿದ್ದಾರೆ. ನಟಿ ಸುಧಾರಾಣಿಯವರು ತಮ್ಮ 12ನೇ ವಯಸ್ಸಿನಲ್ಲಿ  ಶಿವರಾಜ್ ಕುಮಾರ್ ಅಭಿನಯದ ‘ಆನಂದ’ ಚಿತ್ರದ ಮೂಲಕ ಬೆಳ್ಳಿತೆರೆಗೆ  ಕಾಲಿಟ್ಟರು. ಅಂದು ಆ ಚಿತ್ರ ಸೂಪರ್ ಹಿಟ್ ಆಗಿ ಕನ್ನಡ ಚಿತ್ರರಸಿಕರ ಮನದಲ್ಲಿ ಆಳವಾಗಿ ಬೇರೂರಿದರು.


ಈಗ ತಮ್ಮ ಮಗಳನ್ನು ಕೂಡ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲು ಹೊರಟ್ಟಿದ್ದಾರೆ. ಅಷ್ಟೇ ಅಲ್ಲ ನಿಜ ಜೀವನದ ಈ ತಾಯಿ ಮಗಳು ಈ ಚಿತ್ರದಲ್ಲೂ ಕೂಡ  ಅದೇ ಪಾತ್ರವನ್ನು ಮಾಡಲಿದ್ದಾರೆ. ಹೌದು ಸುಧಾರಾಣಿಯವರು ಕೂಡ ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಒಟ್ಟಿನಲ್ಲಿ ತಾಯಿಯಂತೆ ಮಗಳು ಕೂಡ ಬೆಳ್ಳಿತೆರೆಯಲ್ಲಿ ಮಿಂಚಿ ಕನ್ನಡ ಚಿತ್ರರಸಿಕರ ಮನಗೆಲ್ಲಲ್ಲಿ ಅನ್ನುವುದು ಅನೇಕರ ಆಶಯ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ
Show comments