Select Your Language

Notifications

webdunia
webdunia
webdunia
webdunia

ಮನೆಗೆ ವಾಪಾಸಾಗುವಂತೆ ಪುಟ್ಟ ಅಭಿಮಾನಿಯಲ್ಲಿ ಮನವಿ ಮಾಡಿದ ನಟ ಸುದೀಪ್

ಮನೆಗೆ ವಾಪಾಸಾಗುವಂತೆ ಪುಟ್ಟ ಅಭಿಮಾನಿಯಲ್ಲಿ ಮನವಿ ಮಾಡಿದ ನಟ ಸುದೀಪ್
ಬೆಂಗಳೂರು , ಬುಧವಾರ, 30 ಮೇ 2018 (07:00 IST)
ಬೆಂಗಳೂರು : ಅಭಿಮಾನಿಗಳ ಕಷ್ಟಸುಖಗಳಿಗೆ ಯಾವಾಗಲೂ ಸ್ಪಂದಿಸುವ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಇದೀಗ ಮನೆಬಿಟ್ಟು ಹೋದ ತಮ್ಮ ಪುಟ್ಟ ಅಭಿಮಾನಿಯನ್ನು ವಾಪಾಸು ಮನೆಗೆ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ.


ಹೌದು. ಶ್ರೀನಗರದಲ್ಲಿ ವಾಸವಾಗಿರುವ ರಮೇಶ್-ರೂಪಾ ದಂಪತಿಯ ಮಗ ಮಣಿಕಂಠ ಎಂಬ ಬಾಲಕನು ಅಪ್ಪ-ಅಮ್ಮ ಯಾವುದೋ ಸಣ್ಣ ವಿಷಯಕ್ಕೆ ಬೈದ್ರು ಅಂತಾ ಮನೆಬಿಟ್ಟು ಹೋಗಿದ್ದಾನೆ. ಮಗನ್ನು ಕಾಣದೆ ಕಂಗಲಾದ ಹೆತ್ತವರು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಕೂಡ ಆತನ ಸುಳಿವಿಲ್ಲ. ಈ ವಿಚಾರ ತಿಳಿದ ನಟ ಸುದೀಪ್ ಅವರು ವಿಡಿಯೋವೊಂದರ ಮೂಲಕ,’ ಅಪ್ಪ-ಅಮ್ಮನ ಪ್ರೀತಿಯ ಮುಂದೆ ಯಾವುದೂ ದೊಡ್ಡದಲ್ಲ. ನನಗೋಸ್ಕರ ಮನೆಗೆ ಹೋಗು. ನಿನ್ನ ಅಣ್ಣನ ಸ್ಥಾನದಲ್ಲಿ ನಿಂತು ಹೇಳುತ್ತೇನೆ. ದಯವಿಟ್ಟು ಮನೆಗೆ ಹೋಗು. ಆಮೇಲೆ ನಾನೇ ಮನೆಗೆ ಬಂದು ನಿನ್ನ ಭೇಟಿಯಾಗ್ತೇನೆ’ ಎಂದು ಮನವಿ ಮಾಡಿದ್ದಾರೆ.


ಸುದೀಪ್ ಅವರ ಅಪ್ಪಟ ಅಭಿಮಾನಿಯಾದ ಮಣಿಕಂಠ ಈ ವಿಡಿಯೋ ನೋಡಿಯಾದರೂ ಅಮ್ಮನ ಮಡಿಲು ಸೇರುವಂತಾಗಲಿ ಎಂಬುದು ಸುದೀಪ್ ಅವರ ಆಶಯ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರೆಬಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬಕ್ಕೆ ಮೊದಲ ಗಿಫ್ಟ್ ಹಾಗೂ ಕೇಕ್ ನೀಡಿದವರು ಯಾರು….?