Publish Date: Tue, 29 May 2018 (07:50 IST)
Updated Date: Tue, 29 May 2018 (07:52 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಪಾರೂಲ್ ಯಾದವ್ ಅವರು ಅಪ್ರಾಮಾಣಿಕ ಓಲಾ ಚಾಲಕನ ವಿರುದ್ಧ ಕಿಡಿಕಾರಿದ್ದಾರೆ.
ನಟಿ ಪಾರೂಲ್ ಯಾದವ್ ತಮ್ಮ ಮನೆಯನ್ನು ಶಿಫ್ಟ್ ಮಾಡುತ್ತಿರುವ ಕಾರಣ ತಾವು ಪ್ರಯಾಣ ಮಾಡಲು ಓಲಾ ಕ್ಯಾಬ್ ಬುಕ್ ಮಾಡಿದ್ದಾರೆ. ನಂತರ ಓಲಾದಲ್ಲಿ ಪ್ರಯಾಣಿಸುತ್ತಿದ್ದ ನಟಿ ಪಾರೂಲ್ ಯಾದವ್ ಅವರು ಸ್ನೇಹಿತೆಯ ಮದುವೆ ವಾರ್ಷಿಕೋತ್ಸವಕ್ಕಾಗಿ ದಾರಿ ಮಧ್ಯೆದಲ್ಲಿ ವಾಚ್ ಖರೀದಿಸಿ ಅದನ್ನು ಓಲಾದಲ್ಲಿ ಇಟ್ಟು ಮರೆತು ಹೋಗಿದ್ದಾರೆ. ನಂತರ ಅವರು ವಿಮಾನ ನಿಲ್ದಾಣ ತಲುಪುತ್ತಿದ್ದಂತೆ ವಾಚ್ ಕಾಣೆ ಆಗಿರುವುದು ತಿಳಿದು ತಕ್ಷಣ ಓಲಾ ಚಾಲಕನಿಗೆ ಫೋನ್ ಮಾಡಿ ವಿಚಾರಿಸಿದ್ದರೆ ಆತ ನನಗೆ ಯಾವ ವಾಚ್ ಬಗ್ಗೆಯೂ ಗೊತ್ತಿಲ್ಲ ಎಂದು ಸುಳ್ಳು ಹೇಳಿದ್ದಾನೆ.
ನಂತರ ನಟಿ ಪಾರೂಲ್ ಯಾದವ್ ವಿಮಾನ ನಿಲ್ದಾಣನಲ್ಲಿರುವ ಪೊಲೀಸರಿಗೆ ದೂರು ನೀಡಿದ್ದರಿಂದ ಆತನನ್ನು ಪೊಲೀಸರು ಸೆರೆಹಿಡಿದು ನಟಿಗೆ ವಾಚನ್ನು ಹಿಂದಿರುಗಿಸಿದ್ದಾರೆ. ನಂತರ ಪಾರೂಲ್ ಇ-ಮೇಲ್ ಮೂಲಕ ಈ ಬಗ್ಗೆ ಓಲಾದವರಿಗೆ ದೂರು ನೀಡಿದ್ದರೂ ಕೂಡ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂಬುದಾಗಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ