Publish Date: Thu, 20 Oct 2022 (18:56 IST)
Updated Date: Thu, 20 Oct 2022 (19:02 IST)
ಕಾಂತಾರ ಚಿತ್ರಕ್ಕೆ ನಟ ಚೇತನ್ ವಿವಾದಾತ್ಮಕ ಹೇಳಿಕೆ ನೀಡಿದ್ದರ ಕುರಿತು ರಿಯಲ್ ಸ್ಟಾರ್ ಉಪೇಂದ್ರ ರಿಯಾಕ್ಷನ್ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಂತಹ ವಿಚಾರಗಳನ್ನ ನಿರ್ಲಕ್ಷ್ಯ ಮಾಡಬೇಕು, ಈ ವಿಚಾರಗಳ ಬಗ್ಗೆ ಮಾತನಾಡಿದಷ್ಟೂ ಬೆಳೆಯುತ್ತಾ ಹೋಗುತ್ತೆ, ನಾವೇ ಬೆಂಕಿಗೆ ತುಪ್ಪ ಸುರಿಯುತ್ತಿದ್ದೀವಿ.. ಇಂತ ವಿಚಾರಗಳನ್ನ ಇಗ್ನೋರ್ ಮಾಡಬೇಕು. ವೈಯಕ್ತಿಕ ನಂಬಿಕೆಗಳನ್ನು ಇಟ್ಟುಕೊಂಡು ಸಾಮಾಜಿಕವಾಗಿ ಕಿತ್ತಾಡೋದು ಅಸಹ್ಯವಾಗುತ್ತೆ. ಇವತ್ತಿಗೂ ನಾವು ನಂಬಿಕೆಗಳನ್ನು ಬಹಳ ನಂಬುತ್ತೇವೆ. ನಮ್ಮ ಮನೆಯಲ್ಲಿ ನಮ್ಮ ತಂದೆ ಇವತ್ತಿಗೂ ನಾಗರಪೂಜೆ ಮಾಡ್ತಾರೆ. ಇವತ್ತಿಗೂ ನಾವೆಲ್ಲಾ ನಾಗರ ಪೂಜೆ ಮಾಡುತ್ತೇವೆ. ನಂಬಿಕೆ ವಿಚಾರದಲ್ಲಿ ಹೆಚ್ಚು ಮಾತನಾಡಬಾರದೆಂದು ಅಸಮಾಧಾನ ವ್ಯಕ್ತಪಡಿಸಿದರು.