Publish Date: Thu, 20 Oct 2022 (15:53 IST)
Updated Date: Thu, 20 Oct 2022 (15:54 IST)
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹೋಂ ಬ್ಯಾನರ್ ನಲ್ಲಿ ನಟಿಸಿರುವ ಚೊಚ್ಚಲ ಚಿತ್ರ ವೇದ ಬಿಡುಗಡೆ ದಿನಾಂಕ ಬಹಿರಂಗವಾಗಿದೆ.
ಇಂದು ಶಿವಣ್ಣ ವೇದ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. ಇದೇ ಡಿಸೆಂಬರ್ 23 ರಂದು ಸಿನಿಮಾ ಥಿಯೇಟರ್ ನಲ್ಲಿ ತೆರೆ ಕಾಣುತ್ತಿದೆ.
ರಿಲೀಸ್ ಡೇಟ್ ಜೊತೆಗೆ ಚಿತ್ರತಂಡ ಜಬರ್ ದಸ್ತ್ ಪೋಸ್ಟರ್ ಒಂದನ್ನೂ ರಿಲೀಸ್ ಮಾಡಿದೆ. ಗೀತಾ ಪಿಕ್ಚರ್ಸ್ ಅಡಿಯಲ್ಲಿ ಗೀತಾ ಶಿವರಾಜ್ ಕುಮಾರ್ ನಿರ್ಮಿಸಿರುವ ಸಿನಿಮಾವನ್ನು ಎ ಹರ್ಷ ನಿರ್ದೇಶಿಸಿದ್ದಾರೆ. ಸದ್ಯದಲ್ಲೇ ಟೀಸರ್ ಹೊರಬರಲಿದೆ.
-Edited by Rajesh Patil