Select Your Language

Notifications

webdunia
webdunia
webdunia
webdunia

ರಾಖಿ ಸಾವಂತ್‌ಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಹೊಟ್ಟೆಯಲ್ಲಿದ್ದ ಗಡ್ಡೆ ತೋರಿಸಿದ ಮಾಜಿ ಪತಿ ರಿತೇಶ್

ರಾಖಿ ಸಾವಂತ್‌ಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಹೊಟ್ಟೆಯಲ್ಲಿದ್ದ ಗಡ್ಡೆ ತೋರಿಸಿದ ಮಾಜಿ ಪತಿ ರಿತೇಶ್

Sampriya

ಮುಂಬೈ , ಭಾನುವಾರ, 19 ಮೇ 2024 (17:11 IST)
ಮುಂಬೈ: ಗಾಸಿಫ್ ಕ್ವೀನ್, ಬಾಲಿವುಡ್​​ ನಟಿ ರಾಖಿ ಸಾವಂತ್​ ಅವರ ಗರ್ಭಾಶಯದಲ್ಲಿದ್ದ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ತೆಗೆಯಲಾಗಿದೆ ಎಂದು ಆವರ ಮಾಜಿ ಪತಿ ರಿತೇಶ್ ರಾಜ್ ಸಿಂಗ್ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಏಕಾಏಕಿ ಆಗಿದ್ದ ರಾಖಿ ಸಾವಂತ್ ಅವರನ್ನು ನೆಟ್ಟಿಗರು ಇದೊಂದು ಹೊಸ ಡ್ರಾಮಾ ಎಂದು ಟೀಕೆ ಮಾಡಿ, ಟ್ರೋಲ್ ಮಾಡಿದ್ದರು. ಇದೀಗ ಅವರ ರಾಖಿ ಅವರಿಗೆ ಶಸ್ತ್ರಾಚಿಕಿತ್ಸೆ ನಡೆದಿರುವ ಬಗ್ಗೆ ಮಾಜಿ ಪತಿ ರಿತೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ರಾಖಿ ಅವರಿಗೆ ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಗರ್ಭಾಶಯದಲ್ಲಿದ್ದ ಗಡ್ಡೆಯನ್ನು ಹೊರತೆಗೆಯಲಾಯಿತು. ರಾಖಿಗೆ ಇನ್ನೂ ಎಚ್ಚರವಾಗಿಲ್ಲ. ಎದೆ ಮತ್ತು ಹೊಟ್ಟೆ ನೋವಿನಿಂದಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹಲವಾರು ಪರೀಕ್ಷೆಗಳನ್ನು ನಡೆಸಿದ ನಂತರ ವೈದ್ಯರು ರಾಖಿಯ ಗರ್ಭಾಶಯದಲ್ಲಿ ಗಡ್ಡೆಯನ್ನು ಪತ್ತೆ ಮಾಡಿದ್ದಾರೆ. ದೇವರ ದಯೆ ರಾಖಿ ಜೀ ಪರವಾಗಿಲ್ಲ ಮತ್ತು ಆಪರೇಷನ್ ಯಶಸ್ವಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.

ಅದಲ್ಲದೆ ರಾಕಿ ಹೊಟ್ಟೆಯಲ್ಲಿದ್ದ ಗಡ್ಡೆಯನ್ನು ತಮ್ಮ ಮೊಬೈಲ್​ ಫೋನ್​ನಲ್ಲಿ ತೆಗೆದಿದ್ದಾರೆ.  ಗರ್ಭಕೋಶದಲ್ಲಿ ತುಂಬಾ ದೊಡ್ಡದಾದ ಗಡ್ಡೆ ಇತ್ತು. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ರಾಖಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ರಿತೇಶ್​ ಹೇಳಿದ್ದಾರೆ. ಈಗ ರಿತೇಶ್​ ಪುನಃ ಫೋಟೋ ತೋರಿಸುತ್ತಾ, ಇನ್ನಾದರೂ ಟ್ರೋಲ್​ ಮಾಡುವುದನ್ನು ನಿಲ್ಲಿಸಿ, ಡ್ರಾಮಾ ಎಂದು ಹೇಳಬೇಡಿ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆಯಲ್ಲಿ ಗೆದ್ದರೆ ಸಿನಿಮಾಗೆ 'ಗುಡ್‌ ಬೈ': ನಟಿ ಕಂಗನಾ ರಣಾವತ್